HEALTH TIPS

ಮಂಜೇಶ್ವರ ಷಷ್ಠಿ ಉತ್ಸವ ಇಂದಿನಿಂದ: ನಾಳೆ ಧ್ವಜಾವರೋಹಣ


               ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್.ಅನಂತೇಶ್ವರ ಕ್ಷೇತ್ರದ ವಾರ್ಷಿಕ ಷಷ್ಠಿ ಮಹೋತ್ಸವ ಇಂದಿನಿಂದ(ಗುರುವಾರ)ನ.30ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
    ಕಾರ್ಯಕ್ರಮದ ಅಂಗವಾಗಿ ಇಂದು ಮಧ್ಯಾಹ್ನ 1.30ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 10.30ರವರೆಗೆ ಪಲ್ಲಕಿ ಉತ್ಸವ, ವಸಂತಪೂಜೆ, ಮಂಗಳಾರತಿ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಮೃತ್ತಿಕಾರೋಹಣ, 11 ಕ್ಕೆ ಶ್ರೀದೇವರು ಯಜ್ಞಕ್ಕೆ ಆಗಮನ, ಮಧ್ಯಾಹ್ನ 2 ಕ್ಕೆ ಧ್ವಜಾರೋಹಣ, ಸಂಜೆ 4 ಕ್ಕೆ ಯಜ್ಞಾರತಿ, ಬಲಿ, 5 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 10.30ರ ವರೆಗೆ ಬೊಂಬೆ ಚವರು ಉತ್ಸವ, ವಸಂತಪೂಜೆ, ಮಂಗಳಾರತಿ ನಡೆಯಲಿದೆ. ಶನಿವಾರ ಬೆಳಿಗ್ಗೆ 9ಕ್ಕೆ ಹಗಲು ಉತ್ಸವ, 12.30 ಕ್ಕೆ ಯಜ್ಞ, 3.30ಕ್ಕೆ ಯಜ್ಞಾರತಿ, ಬಲಿ, ಸಂಜೆ 4ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 12.30ರ ವರೆಗೆ ಮರದ ಲಾಲ್ಕಿ ಚಂದ್ರಮಂಡಲ, ಸಣ್ಣ ರಥೋತ್ಸವಗಳು,ವಸಂತಪೂಜೆ, ಮಂಗಳಾರತಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9ಕ್ಕೆ ಬೆಳ್ಳಿ ಲಾಲ್ಕಿಹಗಲು ಉತ್ಸವ, 1 ಕ್ಕೆ ಯಜ್ಞ, ಸಂಜೆ 4ಕ್ಕೆ ಯಜ್ಞಾರತಿ, ಬಲಿ, 4.30 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 12.30ರವರೆಗೆ ಗರುಡ ಮಂಟಪ, ಚಂದ್ರಮಂಡಲ, ಸಣ್ಣ ರಥೋತ್ಸವ, ವಸಂತಪೂಜೆ, ಮಂಗಳಾರತಿ ನಡೆಯಲಿದೆ. ಸೋಮವಾರ ಬೆಳಿಗ್ಗೆ 9.30 ಕ್ಕೆ ಸ್ವರ್ಣಲಾಲ್ಕಿ ಹಗಲು ಉತ್ಸವ, 12.30 ಕ್ಕೆ ಪ್ರಾರ್ಥನೆ, 3.30ರವರೆಗೆ ತುಲಾಭಾರ,ಸಂಜೆ 5ಕ್ಕೆ ಮಹಾಪೂಜೆ, 5.30ಕ್ಕೆ ದೇವದರ್ಶನದ ಪ್ರಾರ್ಥನೆ, 6ಕ್ಕೆ ಯಜ್ಞ, ಸಂಜೆ 7.30 ರಿಂದ ಯಜ್ಞಾರತಿ, ಬಲಿ, 8ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 12.30 ರಿಂದ ಮುಂಜಾನೆ 5ರವರೆಗೆ ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ, ಅಡ್ಡಪಲ್ಲಕಿ, ಸಣ್ಣ ರಥೋತ್ಸವಗಳು, ವಸಂತಪೂಜೆ, ಮಂಗಳಾರತಿ ನಡೆಯಲಿದೆ.
        ನ.29 ರಂದು ಮಂಗಳವಾರ ಬೆಳಿಗ್ಗೆ 10 ರಿಂದ 12ರವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1ಕ್ಕೆ ಯಜ್ಞ, 3.30ಕ್ಕೆ ಪೂರ್ಣಾಹುತಿ, ಸಂಜೆ 4ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥಾರೋಹಣಕ್ಕೆ ಹೊರಡುವುದು, ಸಂಜೆ 5ಕ್ಕೆ ರಥಾರೋಹಣ, ರಾತ್ರಿ 8.30ಕ್ಕೆ ರಥಾವರೋಹಣ, 9.30ಕ್ಕೆ ಮಂಗಳಾರತಿ, ಸಮಾರಾಧನೆ ನಡೆಯಲಿದೆ.ನ.30 ರಂದು ಬುಧವಾರ ಮಧ್ಯಾಹ್ನ 1.30ಕ್ಕೆ ಅವಭೃತ, 2.30 ರಿಂದ 4.30ರವರೆಗೆ ಮರದ ಲಾಲ್ಕಿ ಸಣ್ಣ ರಥೋತ್ಸವ, ಸಂಜೆ 5ಕ್ಕೆ ಶೇಷತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7ಕ್ಕೆ ಗಡಿಪ್ರಸಾದ ವಿತರಣೆ, ರಾತ್ರಿ 9.30 ಕ್ಕೆ ಮಹಾಪೂಜೆ, ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries