HEALTH TIPS

ನಕಲಿ ಆನ್‍ಲೈನ್ ಸೇವಾ ಕೇಂದ್ರಗಳ ಪತ್ತೆಗೆ ಜಾಗೃತ ಸಮಿತಿ ರಚನೆ: ಜಿಲ್ಲಾಧಿಕಾರಿ

 

            ಕಾಸರಗೋಡು: ಅಕ್ಷಯಕೇಂದ್ರಗಳ ಹೆಸರಲ್ಲಿ ನಕಲಿ  ಸೇವೆ ಒದಗಿಸುತ್ತಿರುವ ಆನ್‍ಲೈನ್ ಸೇವಾ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಅನಧಿಕೃತ ಆನ್‍ಲೈನ್ ಕೇಂದ್ರಗಳ ನಿಯಂತ್ರಣಕ್ಕೆ ವಿಶೇಷ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಅಕ್ಷಯ ಕೇಂದ್ರಗಳ ಸೇವೆಗಳನ್ನು ಅದೇಮಾದರಿಯಲ್ಲಿ ಖಾಸಗಿ ಆನ್‍ಲೈನ್ ಕೇಂದ್ರಗಳು ಒದಗಿಸುತ್ತಿರುವ ಮಾಹಿತಿ ಲಭಿಸಿದ್ದು,  ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.
              ಇಂತಹ ಆನ್‍ಲೈನ್ ಕೇಂದ್ರಗಳು ಸರ್ಕಾರಿ ವ್ಯವಸ್ಥೆಯ ಮೂಲಕ ನೀಡುತ್ತಿರುವ ಸೇವೆಗಳನ್ನು ಒದಗಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಂಚಾಯಿತಿ ಮಟ್ಟದಲ್ಲಿ ಶಾಶ್ವತ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗುವುದು. ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸಹಾಯಕ ಜಿಲ್ಲಾಧಿಕಾರಿ ಮೇಲ್ನೋಟದಲ್ಲಿನ ಸಮಿತಿಯು ಗ್ರಾಮಾಧಿಕಾರಿ,  ಪಂಚಾಯಿತಿ  ಕಾರ್ಯದರ್ಶಿ ಮತ್ತು ಪೆÇಲೀಸರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ಸಮಿತಿಯು ನಾಲ್ಕು ತಿಂಗಳಿಗೊಮ್ಮೆ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಖು. ಇಂತಹ ಆನ್‍ಲೈನ್ ಕೇಂದ್ರಗಳು ಸಾರ್ವಜನಿಕರಿಂದ ಅತಿಯಾದ ಸೇವಾಶುಲ್ಕ ಪಡೆದು ವಂಚಿಸುತ್ತಿದೆ. ಸರ್ಕಾರಿ ಸಂಸ್ಥೆಗಳ ಸೇವೆಯನ್ನು ಆನ್‍ಲೈನ್ ಆಗಿ ನೀಡುವಲ್ಲಿ ಅಕ್ಷಯ ಕೇಂದ್ರಗಳು ಅಂಗೀಕೃತ ಸಂಸ್ಥೆಗಳಾಗಿ ಸರ್ಕಾರ ಪರಿಗಣಿಸಿದೆ.  ಇಂತಹ ಸರ್ಕಾರಿ ಸೇವೆಗಳನ್ನು ಖಾಸಗಿ ಆನ್ ಲೈನ್ ಕೇಂದ್ರಗಳು ಮುನ್ನಡೆಸಿದಲ್ಲಿ  ಬೆಲೆಬಾಳುವ ದಾಖಲೆಗಳ ದುರುಪಯೋಗವಾಘುವುದರ ಜತೆಗೆ ಜನತೆ ವಂಚನೆಗೊಳಗಾಗುವ ಸಾಧ್ಯತೆಯಿದೆ.  ವಿವಿಧ ಹಂತದ ಭದ್ರತಾ ನಿಗಾ ವ್ಯವಸ್ಥೆ ಹಾಗೂ ಸರ್ಕಾರ ವಿಧಿಸಿರುವ ಸೇವಾ ಶುಲ್ಕವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು  ವಿವಿಧ ಆನ್ ಲೈನ್ ಸೇವೆಗಳಿಗಾಗಿ  ಸರ್ಕಾರದ ಅಕ್ಷಯ ಕೇಂದ್ರಗಳನ್ನು ಮಾತ್ರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
                   ಅಕ್ಷಯ ಸಂವಾದ:
ಅಕ್ಷಯ 20 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ ಉದ್ಯಮಿಗಳ ಜತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸಂವಾದ ನಡೆಸಿದರು.  ಎಡಿಎಂ ಎ.ಕೆ.ರಾಮೇಂದ್ರನ್ ಸಮಾರಂಭ ಉದ್ಘಾಟಿಸಿದರು. ಹಣಕಾಸು ಅಧಿಕಾರಿ ಶಿವಪ್ರಕಾಶನ ನಾಯರ್ ಅಧ್ಯಕ್ಷತೆ ವಹಿಸಿದ್ದರು.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries