HEALTH TIPS

ಇಲ್ಲಿ ವಾಟ್ಸ್ ಆಫ್ ಸಂದೇಶಗಳ ಪ್ರಕಾರ ಕೆಲಸಗಳು ನಡೆಯುತ್ತವೆ: ಫ್ಯಾನ್ ಆಫ್ ಆಗುತ್ತದೆ; ಟ್ಯಾಂಕ್ ತುಂಬುತ್ತದೆ:ಖಾಲಿಯಾಗುತ್ತದೆ: ವಿಚಿತ್ರ ದೂರು ನೀಡಿದ ಕುಟುಂಬ


           ಕೊಟ್ಟಾರಕ್ಕರ: ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ನೆಲ್ಲಿಕುನ್ನು ಎಂಬಲ್ಲಿ ಕಂಡುಬಂದ ವಿಚಿತ್ರ ಘಟನೆ ಬೆರಗುಗೊಳಿಸಿದೆ.
         ವಾಟ್ಸ್ಆ್ಯಪ್‍ನಲ್ಲಿ ಬಂದ ಸಂದೇಶಗಳ ಪ್ರಕಾರ ಮನೆಯಲ್ಲಿ ಕೆಲಸಗಳು ನಡೆಯುತ್ತವೆ ಎಂಬ ದೂರು. ಸೈಬರ್ ಸೆಲ್ ಹಾಗೂ ಪೋಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಳೆದ ಏಳು ತಿಂಗಳಿಂದ ಈ ಮನೆಯಲ್ಲಿ ಕೆಲವು ನಂಬಲಾಗದ ಘಟನೆಗಳು ನಡೆಯುತ್ತಿವೆ. ಮೊದಲು ಸ್ವಿಚ್‍ಬೋರ್ಡ್‍ಗಳು ಮತ್ತು ನಂತರ ವಿದ್ಯುತ್ ಉಪಕರಣಗಳು ಉರಿಯಲಾರಂಭಿಸಿದವು.
       ಕೊಟ್ಟಾರಕ್ಕರ ನೆಲ್ಲಿಕ್ಕುನ್ನು ಕಕ್ಕತನಂನ ರಾಜನ್ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್. ಈ ಮಧ್ಯೆ ತನ್ನದೇ ಮನೆಯಲ್ಲಿ ಸ್ವಿಚ್ ಬೋರ್ಡ್‍ಗಳು ಮತ್ತು ವಿದ್ಯುತ್ ಉಪಕರಣಗಳು ನಿರಂತರವಾಗಿ ಏಕೆ ಉರಿಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈಗ ಈ ಮನೆಯಲ್ಲಿನ ವಿದ್ಯುತ್ ಬೋರ್ಡ್‍ಗಳೆಲ್ಲವೂ ಹಾಳಾಗಿವೆ.
       ರಾಜನ್ ಅವರ ಪತ್ನಿ ಸಜಿತಾರಗೆ ಅವರ ತಾಯಿ ವಿಲಾಸಿನಿಯವರ ಪೋನ್‍ನಿಂದ ಪ್ರತಿದಿನ ವಾಟ್ಸಾಪ್ ಸಂದೇಶಗಳು ಬರುತ್ತಿವೆ.  ರೂಮ್‍ನಲ್ಲಿರುವ ಫ್ಯಾನ್ ಸ್ವಿಚ್ ಆಫ್ ಆಗಲಿದೆ ಎಂದು ಸಜಿತಾಗೆ ವಾಟ್ಸಾಪ್‍ನಿಂದ ಸಂದೇಶ ಬಂದ ಕೆಲವೇ ಕ್ಷಣಗಳಲ್ಲಿ ಅದು ಘಟಿಸಿತು ಕೂಡಾ.  ಟ್ಯಾಂಕ್ ತುಂಬಿದ್ದರೂ ನೀರು ಖಾಲಿಯಾಗಿದೆ ಎಂಬ ಸಂದೇಶ ಬಂದು ನೋಡಿದಾಗಲೂ ಟ್ಯಾಂಕ್ ಖಾಲಿಯಾಗಿ ಬಟಾಬಯಲಾಗಿದೆ. ಫೆÇೀನ್ ಹ್ಯಾಕ್ ಆಗಿದೆ ಎಂದು ಸೈಬರ್‍ಸೆಲ್ ಹೇಳುತ್ತದೆ. ಆದರೆ ಎಲ್ಲವೂ ಹೇಗೆ ನಡೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮೇಲಾಗಿ, ಸಜಿತಾ ಖರೀದಿಸಿದ ಎಲ್ಲಾ ಹೊಸ ಫೆÇೀನ್‍ಗಳು ಮನೆಗೆ ತಲುಪಿದಾಗ ತಾನಾಗಿಯೇ ವೈಬ್ರೇಟ್ ಮತ್ತು ಲಾಕ್ ಆಗುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries