HEALTH TIPS

ರಾಜ್ಯದಲ್ಲಿಯೇ ಮೊದಲ ದತ್ತು ಸ್ವೀಕಾರ ಆದೇಶ ಹೊರಡಿಸಿದ ಕಾಸರಗೋಡು ಜಿಲ್ಲಾಧಿಕಾರಿ: ಎರಡು ಮಕ್ಕಳಿಗೆ ಒದಗಿದ ಭಾಗ್ಯ



       ಕಾಸರಗೋಡು: ದತ್ತು ಸ್ವೀಕಾರ ಆದೇಶಗಳನ್ನು ನ್ಯಾಯಾಲಯದ ವ್ಯಾಪ್ತಿಯಿಂದ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿದ ನಂತರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ರಾಜ್ಯದಲ್ಲಿ ಮೊದಲ ದತ್ತು ಆದೇಶವನ್ನು ಹೊರಡಿಸಿ ಗಮನ ಸೆಳೆದಿರುವರು. ಜಿಲ್ಲೆಯ ದತ್ತು ಸಂಸ್ಥೆಯಾದ ಶಿಶು ವಿಕಾಸ ಭವನದಲ್ಲಿ ಒಂದು ವರ್ಷದ ಇಬ್ಬರು ಗಂಡು ಮಕ್ಕಳ ದತ್ತು ಸ್ವೀಕಾರ ಕುರಿತು ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ವಿಚಾರಣೆ ಮಂಗಳವಾರ ನಡೆಯಿತು.
        ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ದಂಪತಿ ಮಕ್ಕಳನ್ನು ದತ್ತು ಪಡೆದಿದ್ದಾರೆ. ಇವರಿಬ್ಬರ ಅರ್ಜಿಯನ್ನು ಕಾಸರಗೋಡು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು, ಆದರೆ ಬಾಲನ್ಯಾಯ ಕಾಯ್ದೆ-2015ರ ತಿದ್ದುಪಡಿಯನ್ನು ಆಧರಿಸಿ ಕೌಟುಂಬಿಕ ನ್ಯಾಯಾಲಯವು ಜಿಲ್ಲಾಧಿಕಾರಿಗೆ ಮನವಿಯನ್ನು ಹಸ್ತಾಂತರಿಸಿತು. ಈ ಕುರಿತು ಕಡತ ಪರಿಶೀಲಿಸಿದ ಜಿಲ್ಲಾಧಿಕಾರಿ ಕೂಡಲೇ ವಿಚಾರಣೆ ನಡೆಸಲು ಕ್ರಮಕೈಗೊಂಡರು.
           ಬಾಲಾಪರಾಧ ನ್ಯಾಯ ತಿದ್ದುಪಡಿ ಕಾಯ್ದೆ-2021 ಮತ್ತು ದತ್ತು ನಿಯಮಾವಳಿ-2022ರ ಅಡಿಯಲ್ಲಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ದತ್ತು ಆದೇಶವನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳ ವಿಚಾರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎ.ಕೆ.ರಾಮೇಂದ್ರನ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಂಞÂ, ಡಿಸಿಪಿಯು  ಪ್ರೊಟೆಕ್ಷನ್ ಆಫೀಸರ್ ಕೆ.ಶುಹೈಬ್, ಶಿಶುವಿಕಾಸ ಭವನ ಹೋಮ್ ಮ್ಯಾನೇಜರ್ ಪಿ.ಬಿ.ರೇμÁ್ಮ, ಇಬ್ಬರು ಅರ್ಜಿದಾರ ದಂಪತಿಗಳು ಮತ್ತು ಅವರ ಮಕ್ಕಳು ಭಾಗವಹಿಸಿದ್ದರು.
             ನಿಮಗೂ ಆಸಕ್ತಿ ಇದೆಯೇ?:
          ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ದತ್ತು ಸ್ವೀಕಾರ ಪ್ರಕ್ರಿಯೆ ನಡೆಸಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ  ಸಮಾಲೋಚನೆ ಲಭ್ಯವಿದೆ. ದತ್ತು ಪಡೆಯಲು ಆಸಕ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿದ್ಯಾನಗರ ಕಲೆಕ್ಟರೇಟ್‍ನಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಚೆಂಗಳ ಪಂಚಾಯತ್ ವ್ಯಾಪ್ತಿಯ ಚೇರೂರಿನಲ್ಲಿರುವ ಶಿಶು ವಿಕಾಸ ಭವನವನ್ನು ಜಿಲ್ಲೆಯಲ್ಲಿ ದತ್ತು ಸ್ವೀಕಾರ ಸಂಸ್ಥೆಯಾಗಿ ಸಂಪರ್ಕಿಸಬಹುದು. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಕೇರಿಂಗ್ಸ್ ವೆಬ್ ಪೆÇೀರ್ಟಲ್ (www.cara.nic.in) ನಲ್ಲಿ ವಿವರಗಳು ಲಭ್ಯವಿವೆ. ದೂರವಾಣಿ (ಜಿಲ್ಲಾ ಮಕ್ಕಳ ರಕ್ಷಣಾ ಘಟಕ) -04994 256 990.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries