HEALTH TIPS

ದಂತ ವೈದ್ಯ ಕೃಷ್ಣಮೂರ್ತಿ ನಿಗೂಢ ಸಾವು: ಸಿಸಿ ಕ್ಯಾಮರಾ ದೃಶ್ಯಾವಳಿ ಪೊಲೀಸರಿಂದ ಪರಿಶೀಲನೆ
        ಬದಿಯಡ್ಕ: ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ ನಿಗೂಢ ಸಾವಿಗೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಲು ಬದಿಯಡ್ಕಪೊಲೀಸರು ಕ್ರಮ ಆರಂಭಿಸಿದ್ದಾರೆ. ಬದಿಯಡ್ಕದಿಂದ ಡಾ. ಕೃಷ್ಣಮೂರ್ತಿ ಅವರು ನ. 8ರಂದು ನಿಗೂಢವಾಗಿ ನಾಪತ್ತೆಯಾಘಿದ್ದು, ಮರುದಿನ ಇವರ ಮೃತದೇಹ ಕುಮದಾಪುರ ಸನಿಹದ ರೈಲ್ವೆ ಹಳಿಯಲ್ಲಿ ಪತ್ತೆಯಗಿತ್ತು. ಈ ಮಧ್ಯೆ ಡಾ. ಕೃಷ್ಣ ಮೂರ್ತಿ ಅವರು ಕುಂದಾಪುರದಲ್ಲಿ ತಮ್ಮ ಬಟ್ಟೆ ಬದಲಾಯಿಸಿ,  ನಡೆದು ಹೋಗುತ್ತಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಬಹಿರಂಗಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಘಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಬದಿಯಡ್ಕ ಪೊಲೀಸರು ಕುಂದಾಪುರಕ್ಕೆ ತೆರಳಿ ಕೆಲವೊಂದು ಮಾಹಿತಿ ಸಂಗ್ರಹಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries