HEALTH TIPS

ಮಹಿಳೆಯರಿಗೆ ಉದ್ಯೋಗ ಖಚಿತಪಡಿಸಿಕೊಳ್ಳಲು ಉದ್ಯೋಗ ರಂಗಕ್ಕೆ: ಮೊದಲ ಹಂತದಲ್ಲಿ ರಾಜ್ಯದ 1000 ಮಂದಿಗೆ ಉದ್ಯೋಗ

               ಕಾಸರಗೋಡು : ಶೈಕ್ಷಣಿಕ ಅರ್ಹತೆ ಯೋಗ್ಯತೆ ಇದ್ದು ಉದ್ಯೋಗ ಲಭಿಸದ, ಉದ್ಯೋಗಕ್ಕೆ ಅನುಕೂಲಕರ ಪರಿಸ್ಥಿತಿಗಳನ್ನು ಹೊಂದಿರದ ಮಹಿಳೆಯರಿ ಗಾಗಿ ಉದ್ಯೋಗ ರಂಗಕ್ಕೆ ಎಂಬ ಯೋಜನೆಯೊಂದಿಗೆ ಕೇರಳ ನಾಲೆಡ್ಜ್ ಎಕಾನಮಿ ಮಿಷನ್. ವಿದ್ಯಾವಂತ ಮಹಿಳೆಯರಿಗೆ ಖಾಸಗಿ ಉದ್ಯೋಗ ರಂಗದಲ್ಲಿ 2 ತಿಂಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಡುವುದಾಗಿದೆ ಇದರ ಗುರಿ. ಮೊದಲ ಹಂತದ ಚಟುವಟಕೆಯು ಡಿಸೆಂಬರ್‌ನಲ್ಲಿ ಆರಂಭಿಸಿ 2023 ಮಾರ್ಚ್ 8 ರಂದು ಕೊನೆಗೊಳ್ಳುತ್ತದೆ.

                ಸ್ಥಳೀಯ ಆಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಯೋಜನೆ ಅನುಷ್ಠಾನ ಗೊಳ್ಳಲಿದೆ. ಪ್ರಾದೇಶಿಕ ಮಟ್ಟದಲ್ಲಿ ವಿದ್ಯಾವಂತ ಮಹಿಳೆಯರನ್ನು ಸಂಘಟಿಸಿ ಗುಂಪುಗಳನ್ನು ರಚಿಸಲಾಗುವುದು. ಸಮುದಾಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವ ಸಿಡಿಎಸ್ ಸದಸ್ಯರು ಇದರ ನೇತೃತ್ವ ವಹಿಸುತ್ತಾರೆ. ಸಮುದಾಯ ರಾಯಭಾರಿಯು ಸಂಚಾಲಕರಾಗಿರುತ್ತಾರೆ. ನಾಲೆಡ್ಜ್ ಎಕಾನಮಿ ಮಿಷನ್ ತಯಾರಿಸಿದ ಡಿಜಿಟಲ್ ಮ್ಯಾನೇಜ್‌ಮೆಂಟ್ ವರ್ಕ್‌ಫೋರ್ಸ್ ಸಿಸ್ಟಮ್ (ಡಿ ಡಬ್ಲ್ಯೂ ಎಂ ಎಸ್) ಎಂಬ ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸಿದ, ನೋಂದಾವಣೆ ಮಾಡದ ಉದ್ಯೋಗಾಕಾಂಕ್ಷಿ ಸ್ತ್ರೀಯರು, ನೋಂದಾಯಿತ ಮಹಿಳಾ ಉದ್ಯೋಗಾಕಾಂಕ್ಷಿಗಳು, ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ ಮತ್ತು, ಮೀನುಗಾರಿಕಾ ಸಮುದಾಯದ, ವಿಕಲಚೇತನ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್ ಎಂಬೀ ವಿಭಾಗದವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಜಿಲ್ಲೆಯ ಎಲ್ಲಾ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಇದಕ್ಕಾಗಿ, ಸ್ಥಳೀಯ ಆಡಳಿತ ಸಂಸ್ಥೆಗಳು, ವಿವಿಧ ಸರಕಾರಿ ಇಲಾಖೆಗಳು, ಸರಕಾರಿ ಸಂಸ್ಥೆಗಳು ಮತ್ತು ಉದ್ಯೋಗದಾತರಾಗಿರುವ ಖಾಸಗಿ ಸಂಸ್ಥೆಗಳು / ವ್ಯಕ್ತಿಗಳನ್ನು ಯೋಜನೆಯೊಂದಿಗೆ ಸಂಯೋಜಿಸಲಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries