HEALTH TIPS

18.5 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾದ ಆಲ್ರೌಂಡರ್​ ಸ್ಯಾಮ್​ ಕರನ್! ಅತಿ ಹೆಚ್ಚು ಮೊತ್ತಕ್ಕೆ ಬಿಕರಿ ಆದ ಆಟಗಾರ​

 

             ಕೊಚ್ಚಿ: ಮುಂದಿನ ವರ್ಷದ ಐಪಿಎಲ್(ಇಂಡಿಯನ್​ ಪ್ರೀಮಿಯರ್​ ಲೀಗ್​) ​ 16ನೇ ಆವೃತ್ತಿಗೆ ಇಂಗ್ಲೆಂಡ್​ನ ಯುವ ಆಲ್ರೌಂಡರ್​ ಸ್ಯಾಮ್​ ಕರನ್​ ಅವರನ್ನು ಪಂಜಾಬ್ ಕಿಂಗ್ಸ್ ಬರೋಬ್ಬರಿ 18.5 ಕೋಟಿ ರೂ.ಗೆ ಖರೀದಿಸಿದೆ. ಆ ಮೂಲಕ ಐಪಿಎಲ್​ ಮಿನಿ ಹಾರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿ ಆದ ಆಟಗಾರ ಎನಿಸಿಕೊಂಡಿದ್ದಾರೆ.

            ಗಾಯದಿಂದಾಗಿ ಕಳೆದ ಐಪಿಎಲ್​ ಆವೃತ್ತಿ ತಪ್ಪಿಸಿಕೊಂಡಿದ್ದ ಸ್ಯಾಮ್​ ಕರನ್​, ಇತ್ತೀಚೆಗೆ ಟಿ20 ವಿಶ್ವಕಪ್​ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಕರನ್​ರನ್ನು ಮರಳಿ ಸೇರಿಸಿಕೊಳ್ಳಲು ಸಿಎಸ್​ಕೆ ತಂಡ ಬಿಡ್ಡಿಂಗ್​ನಲ್ಲಿ ಪೈಪೋಟಿ ನಡೆಸಿತ್ತಾದರೂ ಅಂತಿಮವಾಗಿ ಪಂಜಾಬ್​ ಕಿಂಗ್ಸ್​ನ ಪಾಲಾದರು.

              ಮೂಲ ಬೆಲೆ 2 ಕೋಟಿಯಿಂದ ಶುರುವಾರ ಬೆಡ್ಡಿಂಗ್​ನಲ್ಲಿ ಆರ್​ಸಿಬಿ ಮತ್ತು ಮುಂಬೈ ನಡುವೆ ಪೈಪೋಟಿ ನಡೆಯಿತು. ಆರ್​ಸಿಬಿ ಬೆಡ್ಡಿಂಗ್​ನಿಂದ ಹೊರಬಂದ ಬಳಿಕ, ಮುಂಬೈ- ರಾಜಸ್ಥಾನ್ ನಡುವೆ ಪೈಪೋಟಿ ನಡೆಯಿತು. ಬೆಡ್ಡಿಂಗ್​ ಮೊತ್ತ 10 ಕೋಟಿ ರೂ. ದಾಟುತ್ತಿದ್ದಂತೆ ಮುಂಬೈ ಹೊರಗುಳಿಯಿತು. ನಂತರ ರಾಜಸ್ಥಾನ್- ಚೆನ್ನೈ ಕಿಂಗ್ಸ್​ ನಡುವಿನ ಪೈಪೋಟಿಯಲ್ಲಿ ಚೆನ್ನೈ ಬಿಡ್​ ಮುಂದುವರಿಸಿತ್ತು. ರಾಜಸ್ಥಾನ್​ ಹೊರ ಬರುತ್ತಿದ್ದಂತೆ ಪಂಜಾಬ್​ ಸೇರಿತು. 18.50 ಕೋಟಿಗೆ ಬಿಡ್​ ಮಾಡಿದ ಪಂಜಾಬ್​ ಕಿಂಗ್ಸ್​ನ ಪಾಲಾದರು ಕರನ್​.

                ಮುಂದಿನ ವರ್ಷ ನಡೆಯಲಿರುವ ಐಪಿಎಲ್ (ಇಂಡಿಯನ್​ ಪ್ರೀಮಿಯರ್​ ಲೀಗ್​) 16ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಕೇರಳದ ಕಡಲ ತೀರ ಕೊಚ್ಚಿಯಲ್ಲಿ ನಡೆಯಿತು. ಬರೋಬ್ಬರಿ 13.25 ಕೋಟಿ ರೂ.ಗೆ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದಾರೆ. 17.50 ಕೋಟಿಗೆ ಆಸ್ಟ್ರೇಲಿಯಾ ಆಟಗಾರ ಕ್ಯಾಮರಾನ್​ ಗ್ರೀನ್​ ಅವರು ಮುಂಬೈ ತಂಡಕ್ಕೆ ಬಿಕರಿಯಾದರೆ, ಬೆನ್​ ಸ್ಟೋಕ್ಸ್​ ಅವರು ಸಿಎಸ್​ಕೆ ತಂಡಕ್ಕೆ 16.25 ಕೋಟಿಗೆ ಸೇಲ್​ ಆದರು.

                 ಹೀಗೆ ನಡೀತು ಹರಾಜು: ಒಟ್ಟು 405 ಆಟಗಾರರ ಪೈಕಿ ಮೊದಲಿಗೆ 86 ಆಟಗಾರರನ್ನು ಬ್ಯಾಟರ್ಸ್​, ಬೌಲರ್ಸ್​, ಆಲ್ರೌಂಡರ್ಸ್​ ಎಂಬಂತೆ ಒಟ್ಟು 13 ಸೆಟ್​ಗಳಲ್ಲಿ ಪ್ರತ್ಯೇಕವಾಗಿ ಹರಾಜಿಗೆ ಇಡಲಾಯಿತು. ಬಳಿಕ ತಂಡಗಳ ಬೇಡಿಕೆ ತಕ್ಕಂತೆ ಇತರ ಆಟಗಾರರನ್ನು ಹರಾಜಿಗೆ ಇಡಲಾಯಿತು. ಮೊದಲ ಸುತ್ತಿನಲ್ಲಿ ಮಾರಾಟವಾಗದ ಆಟಗಾರನನ್ನು 2ನೇ ಸಲವೂ ಹರಾಜಿಗೆ ಇಟ್ಟರು. ಬಿಡ್ಡಿಂಗ್​ನಲ್ಲಿ 1 ಕೋಟಿ ರೂ.ವರೆಗೆ ತಲಾ 5 ಲಕ್ಷ ರೂ., ಬಳಿಕ 2 ಕೋಟಿ ರೂ.ವರೆಗೆ ತಲಾ 10 ಲಕ್ಷ ರೂ., 3 ಕೋಟಿ ರೂ.ವರೆಗೆ ತಲಾ 20 ಲಕ್ಷ ರೂ.ನಂತೆ ಏರಿಕೆಯಾಗುತ್ತಾ ಹೋಯಿತು. ಬಳಿಕ 25 ಲಕ್ಷ ರೂ.ನಂತೆ ಏರಿಕೆಯಾಯೊತು. ಹರಾಜಿನಲ್ಲಿ 2 ಕೋಟಿ ರೂ. ಗರಿಷ್ಠ ಮೂಲಬೆಲೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries