HEALTH TIPS

ಬಡಗು ಶಬರಿಮಲೆ-ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ದೇವಸ್ಥಾನದಲ್ಲಿ 25ರಿಂದ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

             ಕಾಸರಗೋಡು: ಬಡಗು ಶಬರಿಮಲೆ ಎಂದೇ ಕರೆಯಲ್ಪಡುವ 18 ಮೆಟ್ಟಲು ಹೊಂದಿರುವ ಕಾಸರಗೋಡು ತಾಲೂಕಿನ  ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತರ ಕ್ಷೇತ್ರದಲ್ಲಿ  40 ವರ್ಷಗಳ ಬಳಿಕ  ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಧೂಮಾವತಿ, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿ.25ರಿಂದ 2023 ಜನವರಿ 5ರ ತನಕ ಜರುಗಲಿರುವುದಗಿ ದೇವಸ್ಥಾನದ ಆಡಳಿತ ಮೊಕ್ತೇಸರ ಡ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
        ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ  ಹಾಗೂ ವಸ್ತು ಪ್ರದರ್ಶನಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ. ಶ್ರೀಕ್ಷೇತ್ರವು ಶ್ರೀ ಮಹಾದೇವ, ಪಾರ್ವತಿ, ಶಾಸ್ತಾರ, ಗಣಪತಿ, ಸುಬ್ರಹ್ಮಣ್ಯ,  ಪರಶುರಾಮ ಮೊದಲಾದ ದೈವಿಕ ಶಕ್ತಿಗಳನ್ನೊಳಗೊಂಡ ಪವಿತ್ರ ಕ್ಷೇತ್ರವಾಗಿದ್ದು, ಸನಿಹದಲ್ಲಿಯೇ ಶ್ರೀ ಧೂಮಾವತಿ, ಪರಿವಾರ ದೈವಗಳ ಸ್ಥಾನವು  ಸಹ ಜೀರ್ಣೋದ್ಧಾರಗೊಂಡು ದೈವಪ್ರತಿಷ್ಠೆ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಾಯಿಪ್ಪಾಡಿ ಅರಮನೆಯ ಶ್ರೀ ದಾನಮಾತಾರ್ಂಡವರ್ಮ ರಾಜ ಯಾನೆ ರಾಮಂತರಾಸುಗಳ ಉಪಸ್ಥಿತಿ,
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ,  ಹೊರನಾಡು ಕ್ಷೇತ್ರ ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ, ಶ್ರೀ ಹಷೇರ್ಂದ್ರ ಕುಮಾರ್, ದೈವಜ್ಞ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಇವರ ಶುಭ ಆಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿದೆ.ಪ್ರಸಕ್ತ ಶ್ರೀ ಕ್ಷೇತ್ರವನ್ನು 3 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ.
             ಪಾಟು ಉತ್ಸವ ವಿಶೇಷತೆ:
ಕುಂಬ್ಡಾಜೆ ಪಂಚಾಯಿತಿ ಉಬ್ರಂಗಳ ಗ್ರಾಮದಲ್ಲಿರುವ ಈ ಕ್ಷೇತ್ರವು ಬಡಗು ಶಬರಿಮಲೆ ಎಂಬ ಖ್ಯಾತಿ ಹೊಂದಿದೆ. ಎತ್ತರ ಪ್ರದೇಶದಲ್ಲಿರುವ ಕ್ಷೇತ್ರಕ್ಕೆ ಹದಿನೆಂಟು ಮೆಟ್ಟಲುಗಳಿರುವುದು ವಿಶೇಷತೆಯಾಗಿದೆ. ಈ ಕ್ಷೇತ್ರದ ಅನತಿ ದೂರದಲ್ಲಿರುವ ಕಾಟ್ನೂಜಿಯ ವನದಲ್ಲಿ ಉದ್ಭವರೂಪದಲ್ಲಿಯೂ, ಕ್ಷೇತ್ರದಲ್ಲಿ ಪ್ರತಿಷ್ಠಾರೂಪದಲ್ಲಿರುವ ಶ್ರೀ ಶಾಸ್ತಾರನಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದ್ದು,ಪಾಟು ಉತ್ಸವ ನಡೆಸಲ್ಪಡುವ ಉತ್ತರ ಕೇರಳದ ಕೆಲವೇ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಈ ಬಾರಿ ಜಾತ್ರೋತ್ಸವದಂಗವಾಗಿ ಪಾಟು ಉತ್ಸವವು ಜ.3ರಿಂದ 5ರ ತನಕ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ್ ಆಯರ್, ಮಂಗಳೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಯು.ಬಿ.ಕುಣಿಕುಳ್ಳಾಯ, ಕಾಞಂಗಾಡು, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಗಂಗಾಧರ್ ತೆಕ್ಕೆಮೂಲೆ. ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರೊ. ಎ.ಶ್ರೀನಾಥ್ ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries