HEALTH TIPS

ರೂ. 2850 ಕೋಟಿಗೆ 'ಮೆಟ್ರೋ' ಖರೀದಿಸಲಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌

 

             ಮುಂಬೈ: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಜರ್ಮನ್‌ ರಿಟೇಲರ್‌ ಸಂಸ್ಥೆ ಮೆಟ್ರೋ ಎಜಿ ಇದರ ಭಾರತೀಯ ಘಟಕವನ್ನು ರೂ. 2850 ಕೋಟಿಗೆ ಖರೀದಿಸಲು ಒಪ್ಪಿದೆ ಎಂದು ರಿಲಯನ್ಸ್‌ ಸಂಸ್ಥೆ ಮಾಹಿತಿ ನೀಡಿದೆ.

               ಈ ಒಪ್ಪಂದದೊಂದಿಗೆ ರಿಲಯನ್ಸ್‌ ಹೋಲ್‌ಸೇಲ್‌ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿ ಭಾರತದ ಬೆಳೆಯುತ್ತಿರುವ ರಿಟೇಲ್‌ ಕ್ಷೇತ್ರದಲ್ಲಿ ಅಗ್ರ ಸ್ಥಾನಿಯಾಗಲಿದೆ.

              ಈ ತಿಂಗಳು ತನ್ನ ಬೆಲ್ಜಿಯಂ ಘಟಕವನ್ನು ಮಾರಾಟ ಮಾಡಿದ್ದ ಮೆಟ್ರೋ ಇದೀಗ ಭಾರತದ ಘಟಕವನ್ನು ಮಾರಾಟ ಮಾಡುವ ಮೂಲಕ ಸುಮಾರು 150 ಮಿಲಿಯನ್‌ ಯುರೋ ಲಾಭ ಗಳಿಸುವ ಉದ್ದೇಶ ಹೊದಿದೆ.

               ಭಾರತೀಯ ಮಾರುಕಟ್ಟೆಯಲ್ಲಿ 2003 ರಿಂದ ಸಕ್ರಿಯವಾಗಿರುವ ಮೆಟ್ರೋ ಸೆಪ್ಟೆಂಬರ್‌ 2022 ರ ತನಕ 926 ಮಿಲಿಯನ್‌ ಯುರೋ ಮಾರಾಟ ದಾಖಲಿಸಿದೆ. ಅದು ದೇಶದ 21 ನಗರಗಳಲ್ಲಿ 31 ಸ್ಟೋರ್‌ಗಳನ್ನು ಹೊಂದಿದ್ದು ಪ್ರಮುಖವಾಗಿ ರೆಸ್ಟೋರೆಂಟ್‌ಗಳು ಮತ್ತು ಸಣ್ಣ ಉದ್ಯಮಗಳಿಗೆ ಪೂರೈಕೆದಾರನಾಗಿದೆ.

             ಮಾರ್ಚ್‌ 2023 ರೊಳಗಾಗಿ ರಿಲಯನ್ಸ್-ಮೆಟ್ರೋ ಒಪ್ಪಂದ ಜಾರಿಯಾಗುವ ನಿರೀಕ್ಷೆಯಿದೆ.

              ಇನ್ನೊಂದೆಡೆ ಮುಕೇಶ್‌ ಅಂಬಾನಿ ಅವರು ಗೌತಮ್‌ ಅದಾನಿ ಅವರ ಅದಾನಿ ಸಮೂಹದೊಂದಿಗೆ ಸಾಲಪೀಡಿತ ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ಖರೀದಿಸಲು ಸ್ಪರ್ಧೆಯಲ್ಲಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries