HEALTH TIPS

ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿಗೆ 'ಎಯು' ಎಂಬ ಹೆಸರಿನಿಂದ ಕರೆ

 

          ನಾಗ್ಪುರ : ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಗೆಳತಿ ರಿಯಾ ಚಕ್ರವರ್ತಿಗೆ ಹಲವಾರು ಬಾರಿ ಕರೆ ಮಾಡಿರುವ 'ಎಯು' ಎಂಬ ವ್ಯಕ್ತಿ ಯಾರು ಎಂಬುದರ ಪತ್ತೆಗೆ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸದಸ್ಯರು ಗುರುವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.

                  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಶಿವಸೇನಾ ಸಂಸದ ರಾಹುಲ್‌ ಶೆವಾಲೆ ಅವರು, ಬುಧವಾರ ಲೋಕಸಭೆಯಲ್ಲಿ ಸುಶಾಂತ್‌ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಯ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಬಳಿಕ 'ಎಯು' ಹೆಸರಿನಿಂದ ಹಲವು ಬಾರಿ ರಿಯಾ ಅವರಿಗೆ ದೂರವಾಣಿ ಕರೆಗಳು ಬಂದಿರುವುದಾಗಿ ಹೇಳಿದ್ದರು.

                ಗುರುವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಿಂದೆ ಬಣದ ಶಾಸಕ ಪ್ರತಾಪ್‌ ಸರ್‌ನಾಯಕ್ ಅವರು, 'ರಿಯಾ ಅವರಿಗೆ ಎಯುನಿಂದ ಒಟ್ಟು 44 ಕರೆಗಳು ಬಂದಿರುವುದಾಗಿ ಶೆವಾಲೆ ಹೇಳಿದ್ದಾರೆ' ಎಂದರು. ಬಳಿಕ, ಬಿಜೆಪಿ ಮತ್ತು ಶಿಂದೆ ಬಣದ ಸದಸ್ಯರು 'ಎಯು ಯಾರು?' ಎಂದು ಬರೆದಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries