ಮಂಜೇಶ್ವರ: ಮಂಜೀಶ್ವರ ಐ.ಸಿ.ಡಿ.ಎಸ್ ಯೋಜನಾ ವ್ಯಾಪ್ತಿಯ ಮಂಜೇಶ್ವರ, ಮೀಂಜ, ವರ್ಕಾಡಿ, ಪೈವಳಿಕೆ, ಮುಂತಾದ ಗ್ರಾಮಪಂಚಾಯತಿಗಳ ಅಂಗನವಾಡಿಗಳಲ್ಲಿ, ಹೆಲ್ಪರ್ ಹುದ್ದೆಗೆ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಆಯಾ ಪಂಚಾಯತಿಗಳಲ್ಲಿ ಶಾಶ್ವತವಾಗಿ ವಾಸಿಸುವವರಾಗಿದ್ದು, ವಯೋಮಿತಿ 18 ವರ್ಷ ಪೂರ್ತಿಯಾಗಿದ್ದು ಜನವರಿ 1 2023 ಕ್ಕೆ ಅನ್ವಯಿಸುವಂತೆ 46 ವರ್ಷ ಮೀರಬಾರದು. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, ಓದಲು ಬರೆಯಲು ತಿಳಿದಿರುವವರಾಗಿರಬೇಕು. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್ 20 ರಂದು ಸಂಜೆ 5 ಗಂಟೆಯ ವರೆಗೆ. ಅರ್ಜಿಯೊಂದಿಗೆ ವಯಸ್ಸು, ಜಾತಿ, ಶಿಕ್ಷಣದ ಅರ್ಹತೆ ಸಾಬೀತುಪಡಿಸುವ ದಾಖಲೆಗಳು, ಆಧಾರ್ ಕಾರ್ಡ್, ರೇಶನ್ ಕಾರ್ಡ್, ಉದ್ಯೋಗ ಪರಿಚಯ ಪ್ರಮಾಣಪತ್ರ (ಸಂಬಂಧಪಟ್ಟರೆ ಮಾತ್ರ) ಸ್ವಯಂ ದೃಡೀಕರಿಸಿದ ಪ್ರತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಮಂಜೀಶ್ವರ ಬ್ಲಾಕ್ ಕಛೇರಿಯ ಪರಿಸರದಲ್ಲಿರುವ ಐ.ಸಿ.ಡಿ.ಎಸ್ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಅಂಗನವಾಡಿ ಕಾರ್ಯಕರ್ತೆ, ಹೆಲ್ಪರ್ ಹುದ್ದೆಗೆ ಅರ್ಜಿ ಆಹ್ವಾನ
0
December 03, 2022