HEALTH TIPS

'ಪಕ್ಷಗಳ ದೇಣಿಗೆ ಮೊತ್ತದಲ್ಲಿ ಕಡಿತ: ಆಯೋಗದ ಪ್ರಸ್ತಾವ ಪರಿಶೀಲನೆಯಲ್ಲಿ'

 

           ನವದೆಹಲಿ: 'ವ್ಯಕ್ತಿಯೊಬ್ಬರು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ನೀಡುವ ದೇಣಿಗೆಯನ್ನು ₹20 ಸಾವಿರದಿಂದ ₹2 ಸಾವಿರಕ್ಕೆ ಕಡಿತ ಮಾಡಬೇಕು ಎನ್ನುವ ಚುನಾವಣಾ ಆಯೋಗದ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ' ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಅವರು ಗುರುವಾರ ರಾಜ್ಯಸಭೆಗೆ ತಿಳಿಸಿದರು.

            ಆಯೋಗದ ಈ ಪ್ರಸ್ತಾವದ ಕುರಿತು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ 'ಇಲ್ಲ' ಎಂದು ಸಚಿವರು ಉತ್ತರಿಸಿದರು.

                 ಚುನಾವಣೆಯಲ್ಲಿ ಕಪ್ಪು ಹಣದ ಹರಿವನ್ನು ತಡೆಯಲು ಆಯೋಗವು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಪ್ರಸ್ತಾವವನ್ನು ಮುಂದಿಟಿತ್ತು. ರಾಜಕೀಯ ಪಕ್ಷವೊಂದಕ್ಕೆ ಅನಾಮಧೇಯವಾಗಿ ಬರುವ ದೇಣಿಗೆಯ ಮೊತ್ತವನ್ನು ಶೇ 20ರಷ್ಟು ಕಡಿತ ಮಾಡುವುದು ಅಥವಾ ಗರಿಷ್ಟ ₹ 20 ಕೋಟಿಗೆ ನಿಲ್ಲಿಸುವುದು ಆಯೋಗ ಉದ್ದೇಶವಾಗಿದೆ.

               ಜನಪ್ರಾತಿನಿಧ್ಯ ಕಾಯ್ದೆಗೆ ಈ ಸಂಬಂಧ ಹಲವು ತಿದ್ದುಪಡಿ ತರುವ ಕುರಿತು ಮುಖ್ಯಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries