HEALTH TIPS

ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಅಭಿವೃದ್ಧಿ ವಿಚಾರ ಸಂಕಿರಣ:ಯಶಸ್ಸಿನ ಯಶೋಗಾಥೆ ಅನಾವರಣಗೊಳಿಸಿದ ಉದ್ಯಮಿಗಳು

 
 
       ಕಾಸರಗೋಡು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾಹಿತಿ ಕಛೇರಿ ಕಾಸರಗೋಡು ಪ್ರೆಸ್ ಕ್ಲಬ್ ಸಹಯೋಗದಲ್ಲಿ 'ನಿನ್ನೆ, ಇಂದು ಮತ್ತು ನಾಳೆ'ಉದ್ಯಮಿಗಳ ಪ್ರತಿನಿಧಿಗಳ ಅಭಿವೃದ್ಧಿ ವಿಚಾರ ಸಂಕಿರಣ 'ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.
             ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ವಲಯದ ಉನ್ನತಿಗೆ ಸಹಕಾರಿಯಾಗುವುದಾಗಿ ತಿಳಿಸಿದರು.  ಕಾಸರಗೋಡು ಪ್ರೆಸ್‍ಕ್ಲಬ್ ಅದ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ವೃತ್ತಿಪರ ಪದವಿಗಳನ್ನು ಪಡೆದ ಮಕ್ಕಳು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ಬಯಸುತ್ತಾರೆ ಮತ್ತು ಅವರು ತಮ್ಮ ಕೌಶಲ್ಯ ಮತ್ತು ಸಾಮಥ್ರ್ಯವನ್ನು ದೇಶದಲ್ಲಿ ಬಳಸಿದರೆ ದೇಶದ ಅಭಿವೃದ್ಧೀಗೆ ಇದು ಸಹಕಾರಿಯಾಗುವುದಾಗಿ ಕೇರಳ ಸಣ್ಣ ವ್ಯಾಪಾರ ಸಂಘದ ಜಿಲ್ಲಾಧ್ಯಕ್ಷ ರಾಜಾರಾಂ ಪೆರ್ಲ ತಿಳಿಸಿದರು.  ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿ ಮುಜೀಬ್ ಅಹ್ಮದ್ ಸೇರಿದಂತೆ ಹಲವಾರು ಮಂದಿ ಉದ್ಯಮಿಗಳು ಪಾಲ್ಗೊಂಡಿದ್ದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಮಾಹಿತಿ ಸೇವೆಯ ಸ್ಟಾರ್ಟ್ ಅಪ್ ಮಿಷನ್ ಸಹಯೋಗದಲ್ಲಿ ಸಾರ್ವಜನಿಕ ಸಂಪರ್ಕ ಇಲಾಖೆಯು ತಯಾರಿಸಿದ ಕಾಸರಗೋಡು ವಾಯ್ಸ್ ಆಫ್ ಕ್ಯೂಆರ್ ಕೋಡನ್ನು ಬೇಬಿ ಬಾಲಕೃಷ್ಣನ್ ಅನವರಣಗೊಳಿಸಿದರು.
          ವಾರ್ತಾ ಇಲಾಖೆ ಕಣ್ಣೂರು ಪ್ರಾದೇಶಿಕ ಉಪನಿರ್ದೇಶಕ ಪಿ.ಸಿ.ಸುರೇಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ವಿಷಯ ಮಂಡಿಸಿದರು. ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಿಂದ ಆಯ್ಕೆಯಾದ ಉತ್ತಮ ಉದ್ಯಮಿಗಳು ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ಪ್ರದೀಪ್ ನಾರಾಯಣನ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries