HEALTH TIPS

ಬೇಕಲ್ ಉತ್ಸವಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಚಾಲನೆ


        ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಭ್ರಮದ ಚಾಲನೆ ನೀಡಿದರು.  ಕಿವಿಗಡಚಿಕ್ಕುವ ಸುಡುಮದ್ದು ಪ್ರದರ್ಶನದೊಂದಿಗೆ ಹತ್ತು ದಿವಸಗಳ ಕಾಲ ಬೇಕಲದ ಪಳ್ಳಿಕೆರೆ ಕರಾವಳಿಯಲ್ಲಿ ನಡೆಯಲಿರುವ ರಾಜ್ಯದ ಮೊದಲ ಅಂತರಾಷ್ಟ್ರೀಯ ಬೀಚ್  ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
        ಈ ಸಂದರ್ಭ ಮಾತನಾಡಿದ ಅವರು ಬೀಚ್ ಉತ್ಸವಗಳು ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಜಾಗತಿಕ ಮಹಾಮಾರಿ ಕೋವಿಡ್ ನಂತರ ಪ್ರವಸೋದ್ಯಮದಲ್ಲಿ ಚೇತರಿಕೆ ಕಂಡು ಬರುತ್ತಿರುವುದು ಆಶಾದಾಯಕ ವಿಚಾರ.  ಪ್ರವಾಸೋದ್ಯಮ ವಲಯಕ್ಕೆ ಕೋವಿಡ್‍ನಿಂದ ಹೆಚ್ಚಿನ ಹಾನಿಯುಂಟಾಗಿದೆ.  ಕೇರಳದ ಪ್ರವಾಸೋದ್ಯಮ ಚಟುವಟಿಕೆಗಳು ವಿಶ್ವದ ಗಮನ ಸೆಳೆಯಲು ಕಾರಣವಾಗುತ್ತಿದೆ.  ಬೇಕಲ ಫೆಸ್ಟ್‍ನಿಂದ ಬೇಕಲ ಕೋಟೆಯ ಐತಿಹ್ಯ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೇರುವಂತಾಗಲಿ ಎಂದು ತಯಿಳಿಸಿದ ಅವರು  ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ. ಬೇಕಲಕೋಟೆಯಿಂದ ತಿರುವನಂತಪುರದ ಕೋವಳಂ ಬೀಚ್‍ಗೆ ತೆರಳಲು ಪ್ರವಾಸಿಗರು ಹೆಚ್ಚಿನ ಸಮಯಾವಕಶ ಪಡೆದುಕೊಳ್ಳುತ್ತಿರುವುದರಿಂದ ಇಲ್ಲಿ ಏರ್ ಟೂರಿಸಂ ಅಭಿವೃದ್ಧಿಪಡಿಸುವುದರ ಕುರಿತೂ ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು. ಕೋವಿಡ್ ಆತಂಕ ದೂರಾಗುತ್ತಿದ್ದಂತೆ ಸನಿಹದ ದೇಶದಲ್ಲಿ ಉಲ್ಬಣಿಸಿರುವ ಕರೊನಾ, ಭಾರತದ ಜನತೆಯನ್ನು ಮತ್ತೆ ಜಾಗೃತ ಸ್ಥಿತಿಗೆ ತಲುಪುವಂತೆ ಮಾಡಿದೆ. ಕರೊನಾ ಬಗ್ಗೆ ಆತಂಕಿತರಾಗದೆ, ಮಾನದಂಡ ಪಾಲಿಸುವುದೊಂದೇ ಪರಿಹಾರ ಎಂದು ತಿಳಿಸಿದರು.         ಕಾರ್ಯಕ್ರಮದ ಸಂಚಾಲಕ, ಶಾಸಕ ಸಿಎಚ್ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ರಾಜಮೋಹನ್ ಉಣ್ಣಿತ್ತಾನ್ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು, ಜಿ.ಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಮಾಜಿ ಸಂಸದ ಪಿ.ಕರುಣಾಕರನ್, ಮಾಜಿ ಶಾಸಕರಾದ ಕೆ. ಕುಞÂರಾಮನ್, ಕೆ.ವಿ ಕುಞÂಕಣ್ಣನ್, ಕೆ.ವಿ ಕುಞÂರಾಮನ್, ಕಾಞಂಗಾಡು ಬ್ಲಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠ, ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ ಕೆ.ವಿ, ಬಿಆರ್‍ಡಿಸಿ ನಿರ್ದೇಶಕ  ಹುಸೈನ್ಕುಞÂ, ಇತರ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬಿಆರ್‍ಡಿಸಿ ಎಂಡಿ ಶಿಜಿನ್ ಸ್ವಾಗತಿಸಿದರು.
             ಬೇಕಲ್ ಫೆಸ್ಟ್‍ನಲ್ಲಿ ಸಾಂಸ್ಕøತಿಕ ಸಂಜೆಗಳು, ಸ್ಥಳೀಯ ಕಲಾ ಪ್ರದರ್ಶನಗಳು ಮತ್ತು ಆಹಾರ ಮೇಳ ಪ್ರೇಕ್ಷಕರನ್ನು ಆಕರ್ಷಿಸಲಿದ್ದು, ಜತೆಗೆ ನಿರಂತರ ಸಾಂಸ್ಕøತಿಕ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಾಗಿ ನಡೆದುಬರಲಿದೆ.  ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳ ಹೊರತಾಗಿ, ಬೀಚ್ ಕ್ರೀಡೆಗಳು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಉತ್ಸವಕ್ಕೆ ಚಂದ್ರಗಿರಿ, ತೇಜಸ್ವಿನಿ ಮತ್ತು ಪಯಸ್ವಿನಿ ಎಂಬ ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ದಿನಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
            ವಿಶ್ವ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲ ಕೋಟೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಇಲ್ಲಿಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ನೂರಿನ್ ಸಿಸ್ಟರ್ಸ್, ಸಿತಾರಾ ಕೃಷ್ಣಕುಮಾರ್, ಶಬ್ನಮ್ ರಿಯಾಜ್, ಪ್ರಸೀತಾ ಚಾಲಕುಡಿ, ಮಟ್ಟನ್ನೂರು ಶಂಕರನ್‍ಕುಟ್ಟಿ ಮತ್ತು ಸ್ಟೀಫನ್ ಮುಂತಾದ ಮಹಾನ್ ಕಲಾವಿದರು ಮುಂದಿನ ಹತ್ತು ರಾತ್ರಿಗಳನ್ನು ಕಲಾತ್ಮಕ ಆನಂದದ ವಿಭಿನ್ನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಚಂದ್ರಗಿರಿ, ಮುಖ್ಯ ವೇದಿಕೆಯಲ್ಲಿ ರಾಷ್ಟ್ರೀಯ ಕಲಾವಿದರಿಂದ ಕಾರ್ಯಕ್ರಮಗಳು ಮತ್ತು ತೇಜಸ್ವಿನಿಯಲ್ಲಿ ಕುಟುಂಬಶ್ರೀ ಕಾರ್ಯಕರ್ತರಿಂದ ಕಾರ್ಯಕ್ರಮಗಳು ನಡೆಯಲಿದೆ. ಜಿಲ್ಲೆಯ ಸ್ಥಳೀಯ ಕಲಾವಿದರು ಆಯ್ಕೆ ಮಾಡಿದ ಸಾಂಪ್ರದಾಯಿಕ ಮತ್ತು ವಿಶಿಷ್ಟ ಕಲಾ ಪ್ರಕಾರಗಳನ್ನು ಪಯಸ್ವಿನಿಯಲ್ಲಿ ಏಕಕಾಲದಲ್ಲಿ ಪ್ರಸ್ತುತಪಡಿಸಲಾಗುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries