HEALTH TIPS

ಅಯ್ಯೋ ದುರ್ವಿಧಿಯೇ! ನ್ಯೂಸ್​ ಚಾನೆಲ್​ ನೋಡುತ್ತಿರುವಾಗಲೇ ಮಗಳ ಸಾವಿನ ಸುದ್ದಿ ನೋಡಿ ಕುಸಿದುಬಿದ್ದ ಕುಟುಂಬ

 

           ಆಲಪ್ಪುಳ: ಕೇರಳದ ಆಲಪ್ಪುಳ ಮೂಲದ ರಾಷ್ಟ್ರೀಯ ಸೈಕಲ್​ ಪೋಲೋ ಆಟಗಾರ್ತಿ ಫಾತಿಮಾ ನಿದಾ ಫುಡ್ ಪಾಯಿಸನಿಂಗ್​ನಿಂದಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೃತಪಟ್ಟಿದ್ದು, ಸುದ್ದಿ ಮಾಧ್ಯಮಗಳಿಂದ ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

                 ಫಾತಿಮಾಳ ತಂದೆ ಶಿಹಾಬುದ್ದೀನ್​ ಓರ್ವ ಚಾಲಕ. ಮಗಳ ಸ್ಥಿತಿ ಗಂಭೀರವಾಗಿರುವ ಬಗ್ಗೆ ಮೊದಲು ಕರೆ ಸ್ವೀಕರಿಸಿದ ಶಿಹಾಬುದ್ದೀನ್​, ತಕ್ಷಣ ನಾಗ್ಪುರದಲ್ಲಿರುವ ಮಗಳನ್ನು ನೋಡಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ನ್ಯೂಸ್​ ಚಾನೆಲ್​ ವೀಕ್ಷಣೆ ಮಾಡುವಾಗ ಮಗಳು ಮೃತಪಟ್ಟಿರುವ ಸುದ್ದಿ ನೋಡಿ ಅಲ್ಲಿಯೆ ಕುಸಿದು ಬೀಳುತ್ತಾರೆ. ವಿಮಾನ ನಿಲ್ದಾಣದಲ್ಲಿ ತಂದೆಯ ರೋಧನೆ ನೋಡಿದ ಪ್ರಯಾಣಿಕರು ಕೂಡ ಕಂಬನಿ ಮಿಡಿಯುತ್ತಾರೆ.

               ಇದಕ್ಕು ಮುನ್ನ ಪತ್ನಿ ಅನ್ಸಿಲಾ ಮತ್ತು ಮಗ ಮೊಹಮ್ಮದ್​ ನಬೀಲ್​​ಗೆ ಮಗಳ ಸ್ಥಿತಿಯ ಬಗ್ಗೆ ಶಿಹಾಬುದ್ದೀನ್​ ತಿಳಿಸಿರುವುದಿಲ್ಲ. ಆದರೆ, ನ್ಯೂಸ್​ ಚಾನೆಲ್​ ಮೂಲಕ ಮಗಳ ಸಾವಿನ ಸಂಗತಿ ತಿಳಿದಾಗ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ.

               ರಾಷ್ಟ್ರೀಯ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನ ಆಯೋಜಕರು ಕೇರಳ ತಂಡಕ್ಕೆ ವಸತಿ ವ್ಯವಸ್ಥೆ ಮಾಡುವುದನ್ನು ತಪ್ಪಿಸಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಇಂಡಿಯನ್ ಸೈಕಲ್ ಪೋಲೋ ತಂಡದ ಮಾಜಿ ನಾಯಕ ಪಿ.ಶಿವಕುಮಾರ್ ಆರೋಪಿಸಿದ್ದಾರೆ. ಸಂಸ್ಥೆಯ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ತಾತ್ಕಾಲಿಕ ಸೌಲಭ್ಯಗಳನ್ನು ಸ್ಥಾಪಿಸಲಾಗಿತ್ತು ಎಂದು ಶಿವಕುಮಾರ್ ಹೇಳಿದರು.

                 ಈ ಕುರಿತು ಮಾಹಿತಿ ನೀಡಿದ ಸಂಸದೆ ಪಿ.ಟಿ.ಉಷಾ, ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಫಾತಿಮಾ ನಿದಾ ಅವರು ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಳು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries