HEALTH TIPS

ನೇತಾಜಿಯನ್ನು ಕೆಲವು ಕುಟುಂಬಾಡಳಿತ ವಂಚಿಸಿತ್ತು: ಇಂದು ಆ ದುರಂತವನ್ನು ದೇಶ ಸರಿಪಡಿಸುತ್ತಿದೆ: ಅದಕ್ಕೆ 125 ವರ್ಷಗಳು ಬೇಕಾಯಿತು: ಸಂದೀಪ್ ವಾಚಸ್ಪತಿ


           ತಿರುವನಂತಪುರ: ರಾಷ್ಟ್ರೀಯ ಚಳವಳಿಯ ನಾಯಕನನ್ನಾಗಿ ಜನರು ಆಯ್ಕೆ ಮಾಡಿದರೂ ಕಾಂಗ್ರೆಸ್ ಪಕ್ಷ ನೇತಾಜಿ ಸುಭಾμï ಚಂದ್ರ ಬೋಸ್ ಅವರನ್ನು ಅವಮಾನಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾಚಸ್ಪತಿ ಹೇಳಿದ್ದಾರೆ.
           ಕೆಲವು ಕುಟುಂಬ ಆದಿಪತ್ಯಗಳು ನೇತಾಜಿಗೆ ಕೇವಲ ಕೃತಘ್ನತೆ ತೋರಿಸಿದರು. ಆ ತಪ್ಪನ್ನು ಸರಿಪಡಿಸಲು ರಾಷ್ಟ್ರಕ್ಕೆ 125 ವರ್ಷಗಳು ಬೇಕಾಯಿತು. ನಿರ್ವೀಣ್ಯರಾಗಿದ್ದ ಹಲವು ವಿಷಯಗಳ, ಇತಿಹಾಸದ ಪುನರ್ ನಿರ್ಮಾಣ ಕಾರ್ಯ ಈಗ ನಡೆಯುತ್ತಿದ್ದು, ಅದನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದು ಸಂದೀಪ್ ವಾಚಸ್ಪತಿ ತಿಳಿಸಿದರು.
             'ಭಾರತ ಅದೃಷ್ಟಶಾಲಿ' ಎಂಬಂತಹ ಅಭಿನಂದನೆಗಳು ಇರಲಿಲ್ಲ. ರಾಷ್ಟ್ರೀಯ ಆಂದೋಲನದ ನಾಯಕರಾಗಿ ಜನರಿಂದ ಆಯ್ಕೆಯಾದರು ಬೋಸ್, ಆದರೆ ‘ರಾಷ್ಟ್ರೀಯ’ ಪಕ್ಷದಿಂದ ಅವಮಾನಗೊಂಡು ನಿರ್ಗಮಿಸಿದರು. ನೇತಾಜಿಯ ವಿಜಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬ ಗಾಂಧೀಜಿಯವರ ಧೋರಣೆಯಿಂದಾಗಿಯೇ ಕಾಂಗ್ರೆಸ್ ಗುಂಪು ರಾಜಕೀಯ ಮತ್ತು ಕುಟುಂಬ ಆಡಳಿತಗಳಿಂದ ಅಧೋಗತಿಗೆ ಇಳಿಯಲು ಪ್ರಾರಂಭಿಸಿತು. ದೇಶದ ವಿಮೋಚನೆಗಾಗಿ ಪ್ರಾಣ ಕೊಡಲು ಸಿದ್ಧವಾಗಿರುವ ವಿರುದ್ದವಿದ್ದ ಕಮ್ಯುನಿಸ್ಟ್ ಸಮರಕ್ಕೆ ಧಿಕ್ಕಾರ ಕೂಗಿತ್ತು. ಬೋಸ್ ಅವರ ಸಾವೂ ಕುತಂತ್ರದ ಭಾಗ ಎಂದು ಅವರು ತಿಳಿಸಿದರು.
          'ಜಗತ್ತು ಕಂಡ ಮಹಾನ್ ಸರ್ವಾಧಿಕಾರಿ ಹಿಟ್ಲರ್ ಕೂಡ ಫ್ಯೂರರ್ (ನಾಯಕ) ಎಂದು ಕರೆದ ನಾಯಕತ್ವ ಬೋಸ್ ರದ್ದು. ಸೂರ್ಯನಿಲ್ಲದ ಸಾಮ್ರಾಜ್ಯದ ವಿರುದ್ಧ ಮುಖಾಮುಖಿಯಾಗಿ ಹೋರಾಡಿ ರಂಗೂನ್‍ನವರೆಗೂ ವಶಪಡಿಸಿಕೊಂಡ ಯೋಧ. ಆದರೆ ನೇತಾಜಿ ಎಂಬ ಭಾರತೀಯ ವ್ಯಕ್ತಿಗೆ ರಾಜವಂಶದ ಆಡಳಿತಗಾರರು ಕೇವಲ ಕೃತಘ್ನತೆಯನ್ನು ತೋರಿಸಿದರು. ಆ ತಪ್ಪನ್ನು ಇಂದು ದೇಶ ಸರಿಪಡಿಸುತ್ತಿದೆ. ಇದು 125 ವರ್ಷಗಳನ್ನು ತೆಗೆದುಕೊಂಡಿತು ಎಂಬುದು ಹೃದಯ ವಿದ್ರಾವಕವಾಗಿದೆ. ಆದರೆ ಇದು ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಸ್ವಾಭಿಮಾನದ ಸಂಕೇತವಾಗಿದೆ. ಇದು ಹೀಗೆಳೆಯಲ್ಪಟ್ಟ ಇತಿಹಾಸದ ಮರುಸ್ಥಾಪನೆಯಾಗಿದೆ. ಅದನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ನಮನಗಳು' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries