HEALTH TIPS

ಪತ್ತನಂತಿಟ್ಟ ನಗರಮಧ್ಯದಲ್ಲಿ ಬರುತ್ತಿದೆ,133 ಅಡಿಯಿರುವ ವಿಶ್ವದ ಅತ್ಯಂತ ದೊಡ್ಡ ಐಯ್ಯಪ್ಪ ಶಿಲ್ಪ: ಪಂದಳಂನಿಂದ ವೀಕ್ಷಿಸಬಹುದಾದ ಪ್ರತಿಮೆ


       ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪನ ಜನ್ಮಸ್ಥಳವಾಗಿದ್ದ ಪಂದಳದಿಂದ ವೀಕ್ಷಿಸಬಹುದಾದ ರೀತಿಯಲ್ಲಿ ಪತ್ತನಂತಿಟ್ಟ ನಗರ ಮಧ್ಯದಲ್ಲಿ ವಿಶ್ವದ ಅತ್ಯಂತ ದೊಡ್ಡ ಅಯ್ಯಪ್ಪ ಶಿಲ್ಪವನ್ನು ಸ್ಥಾಪಿಸಲಾಗಿದೆ.
         ಶ್ರೀರಾಮ-ಸೀತಾದೇವಿ ತಂಗಿದ್ದರೆಂದು ನಂಬಲಾಗುವ ಪವಿತ್ರವಾದ ಸ್ಥಳವು ಸಮುದ್ರದಲ್ಲಿ 400 ಅಡಿ ಎತ್ತರದಲ್ಲಿರುವ ಚುಟ್ಟಿಪ್ಪಾರ. ಇಲ್ಲಿ ಬೃಹತ್ ಅಯ್ಯಪ್ಪ ಶಿಲ್ಪ ನಿರ್ಮಿಸಲಾಗುತ್ತಿದೆ. ಸೀತಾದೇವಿಯು ಸ್ನಾನಗೈದರೆಂದು ಭಾವಿಸಲಾಗುವ ಕೆರೆಯೊಂದು ಇದೇ ಪರಿಸರದಲ್ಲಿದೆ. 133 ಅಡಿ ಎತ್ತರದ ಅಯ್ಯಪ್ಪನ ಯೋಗೀ ಭಾವದಲ್ಲಿರುವ ಶಿಲ್ಪವನ್ನು ನಿರ್ಮಿಸುತ್ತಿರುವುದು ಚುಟ್ಟಿಪ್ಪಾರ ಮಹಾದೇವ ದೇವಸ್ಥಾನ ಟ್ರಸ್ಟ್ ಆಗಿದೆ.
         ದೇವಸ್ಥಾನ ಟ್ರಸ್ಟ್ ರಕ್ಷಾಧಿಕಾರಿ, ವಾಸ್ತು ಶಾಸ್ತ್ರ ವಿದ್ವಾಂಸರಾದ ಮೋಕ್ಷಗಿರಿ ಮಠದ ಡಾ. ರಮೇಶ್ ಶರ್ಮಾ ಅವರ ಮೇಲ್ನೋಟದಲ್ಲಿ ತಿರುವನಂತಪುರದ ಆಳಿಮಲೆಯಲ್ಲಿ ಅತ್ಯಂತ ದೊಡ್ಡ ಶಿವ ಪ್ರತಿಮೆ ಸ್ಥಾಪಿಸಿದ ಶಿಲ್ಪಿ ದೇವದತ್ತರ ನೇತೃತ್ವದಲ್ಲಿ ಇಲ್ಲಿ ಅಯ್ಯಪ್ಪ ಶಿಲ್ಪ ರಚನೆಯಾಗುತ್ತಿದೆ 34 ಕಿ. ಮೀ ದೂರದಲ್ಲಿರುವ ಎತ್ತರದ ಪ್ರದೇಶಗಳಿಂದ ದರ್ಶಿಸಲು ಸಾಧ್ಯವಾಗುವ ಶಿಲ್ಪವು ಪತ್ತನಂತಿಟ್ಟ ಜಿಲ್ಲೆಗೆ ಪ್ರವೇಶಿಸುವಾಗಲೇ ಕಾಣಿಸಲಿದೆ. ಅಯ್ಯಪ್ಪ ಚರಿತಂ ಒಳಗೊಂಡಿರುವ ಸಂಗ್ರಹಾಲಯ,ಪಂದÀಳಂ ಅರಮನೆಯ ಮಾದರಿ, ಪೂಂಗಾವನಂ ಮತ್ತು ಪಂಬ, ಅಳುತ ನದಿಗಳ ವಿವರಣೆಗಳು ವಾವರುಸ್ವಾಮಿಯ ಪ್ರತಿಮೆಗಳು ಇದರ ಭಾಗವಾಗಿ ಇರುತ್ತದೆ. ಕಾಂಕ್ರೀಟ್ ಬಳಸಿ ಶಿಲ್ಪ ತಯಾರಿಸಲಾಗುತ್ತದೆ. ಪತ್ತನಂತಿಟ್ಟ ನಗರ ಮಧ್ಯದಲ್ಲಿ ಈ ಶಿಲ್ಪ ಸ್ಥಾಪಿಸಲಾಗುತ್ತದೆ. 133 ಅಡಿಯಿರುವ ವಿಶ್ವದ ಅತ್ಯಂತ ದೊಡ್ಡ ಐಯ್ಯಪ್ಪಸ್ವಾಮಿ ಶಿಲ್ಪ ಎಂಬ ಖ್ಯಾತಿಗೆ ಇದು ಭಾಜನವಾಗಲಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries