HEALTH TIPS

ದೇಶದಲ್ಲಿ ಉದ್ಯೋಗಸ್ಥರ ಸಂಖ್ಯೆ 1.4 ಕೋಟಿಯಷ್ಟು ಕುಸಿತ

 

                 ಮುಂಬೈ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿ, ಉದ್ಯೋಗ ಕ್ಷೇತ್ರ ಪುನಶ್ಚೇತನಗೊಳ್ಳುತ್ತಿದ್ದರೂ, ಕೋವಿಡ್ ಪೂರ್ವ ಸ್ಥಿತಿಗೆ ಹೋಲಿಸಿದರೆ ದೇಶದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ ಎರಡು ವರ್ಷದ ಅವಧಿಯಲ್ಲಿ 1.4 ಕೋಟಿಯಷ್ಟು ಕಡಿಮೆಯಾಗಿದೆ.

                     2022ರ ಅಕ್ಟೊಬರ್‌ನಲ್ಲಿದ್ದ ಉದ್ಯೋಗಸ್ಥರ ಸಂಖ್ಯೆ 2020ರ ಜನವರಿಯಲ್ಲಿದ್ದ ಉದ್ಯೋಗಸ್ಥರ ಸಂಖ್ಯೆಗಿಂತ 14 ದಶಲಕ್ಷದಷ್ಟು ಕಡಿಮೆ ಇದ್ದು, 45 ಲಕ್ಷ ಪುರುಷರು ಹಾಗೂ 96 ಲಕ್ಷ ಮಹಿಳಾ ಉದ್ಯೋಗಿಗಳ ಸಂಖ್ಯೆ ಕುಸಿದಿದೆ ಎಂದು ಸಿಇಡಿಎ-ಸಿಎಂಐಇ ಬುಲೆಟಿನ್ ಹೇಳಿದೆ.

                    ಅಶೋಕ ವಿಶ್ವವಿದ್ಯಾನಿಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರ ಹಾಗೂ ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಜನತೆಯ ಹಣಕಾಸು ಹರಿವು ಮತ್ತು ಉದ್ಯೋಗದ ಮೇಲೆ ಸಾಂಕ್ರಾಮಿಕ ಹೇಗೆ ಪರಿಣಾಮ ಬೀರಿದೆ ಎಂಬ ಸಮೀಕ್ಷೆ ಕೈಗೊಂಡು ವರದಿ ಸಿದ್ಧಪಡಿಸಲಾಗಿದೆ. 2022ರ ಡಿಸೆಂಬರ್ 27ರಂದು ಬಿಡುಗಡೆಯಾದ "ದ ಇಂಪ್ಯಾಕ್ಟ್ ಆಫ್ ಕೋವಿಡ್-19 ಪೆಂಡಮಿಕ್ ಆನ್ ಪೀಪಲ್ಸ್ ಎಕನಾಮಿಕ್ ಲೈವ್ಸ್' ವರದಿಯಲ್ಲಿ ಉದ್ಯೋಗದ ಮೇಲಿನ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

                   ವರದಿ ಸಿದ್ಧಪಡಿಸಿದ ಪ್ರೀತಾ ಜೋಸೆಫ್ ಹಾಗೂ ರಾಶಿಕಾ ಮೌದ್ಗೀಲ್ ಅವರ ಪ್ರಕಾರ, ಯುವಜನತೆ (15 ರಿಂದ 39 ವಯೋಮಿತಿ) ಕಳೆದ ಮೂರು ವರ್ಷಗಳಲ್ಲಿ ತೀರಾ ಸಂಕಷ್ಟ ಅನುಭವಿಸಿದ್ದಾರೆ. 2020ರ ಜನವರಿಯಲ್ಲಿ ಉದ್ಯೋಗದಲ್ಲಿದ್ದ ಈ ವಯೋಮಿತಿಯ ಸದಸ್ಯರಿಗೆ ಹೋಲಿಸಿದರೆ 2022ರ ಅಕ್ಟೋಬರ್ ವೇಳೆಗೆ ಉದ್ಯೋಗದಲ್ಲಿರುವ ಯುವಜನತೆಯ ಪ್ರಮಾಣ ಶೇಕಡ 20ರಷ್ಟು ಕಡಿಮೆಯಾಗಿದೆ. ಅಂದರೆ 36.5 ದಶಲಕ್ಷದಷ್ಟು ಕಡಿಮೆ. ಇದಕ್ಕೆ ತದ್ವಿರುದ್ಧವಾಗಿ 40-59 ವರ್ಷ ವಯೋಮಿತಿಯ ಉದ್ಯೋಗಿಗಳ ಸಂಖ್ಯೆ ಶೇಕಡ 12ರಷ್ಟು ಹೆಚ್ಚಿದೆ. 2020ರ ಜನವರಿಗೆ ಹೋಲಿಸಿದರೆ 2022ರ ಅಕ್ಟೋಬರ್‌ನಲ್ಲಿ ಈ ವಯೋಮಿತಿಯ 25 ದಶಲಕ್ಷ ಮಂದಿ ಹೆಚ್ಚಿನ ಉದ್ಯೋಗಿಗಳಿದ್ದಾರೆ ಎಂದು ವರದಿ ವಿವರಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries