HEALTH TIPS

ಪನತ್ತಡಿ ಗ್ರಾಮ ಪಂಚಾಯಿತಿಯ 150 ವಸತಿ ರಹಿತ ಪರಿಶಿಷ್ಟ ಜಾತಿ ಕುಟುಂಬಕ್ಕೆ ಭೂಮಿ ಮಂಜೂರು


 

          ಕಾಸರಗೋಡು: ಸ್ವಂತ ಜಮೀನು ಹೊಂದುವುದು ಪ್ರತಿಯೊಬ್ಬರ ಕನಸಾಗಿದ್ದು, ಜನರ ಬಹುದಿನಗಳ ಈ ಕನಸು ನನಸಾಗಲಿದೆ. ಪನತ್ತಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 150 ವಸತಿ ರಹಿತ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸ್ವಂತ ಭೂಮಿ ಮಂಜೂರಾಗಿ ಲಭಿಸಿದ್ದು, ಇದರ ಹಕ್ಕುಪತ್ರ ಶೀಘ್ರ ಕೈಸೇರಲಿದೆ. ಪನತ್ತಡಿ ಗ್ರಾಮ ಪಂಚಾಯಿತಿಯ ಚಾಮುಂಡಿಂಕುನ್ನುವಿನಲ್ಲಿ ಈ ಭೂಮಿ ಮೀಸಲಿರಿಸಲಾಗಿದೆ. ಇಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳಿಗಾಗಿ ಅರಣ್ಯ ಇಲಾಖೆ ಮಂಜೂರು ಮಾಡಿದ 75 ಎಕರೆ ಜಮೀನಿನಲ್ಲಿ ತಲಾ 50 ಸೆಂಟ್ಸ್ ಭೂಮಿಯನ್ನು ವಿತರಿಸಲಾಗುತ್ತದೆ.  ಹಕ್ಕುಪತ್ರ ನೀಡುವ ಮುನ್ನ ಸರ್ಕಾರ ಮಂಜೂರು ಮಾಡಿರುವ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ತೋರಿಸಿಕೊಡಲಯಿತು.
            ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ವಿ.ಮುರಳಿ, ಪರಪ್ಪ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಹೆರಾಲ್ಡ್ ಜಾನಿ, ಸರ್ವೆ ಮತ್ತು ಅರಣ್ಯ  ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಸ್ಥಳದ ಬಗ್ಗೆ ಮಾಹಿತಿ ನೀಡಿದರು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries