HEALTH TIPS

ಆಂಧ್ರಪ್ರದೇಶ: ಸರ್ಕಾರ ನೀಡಿದ್ದ ನಿವೇಶನ ನಿರಾಕರಿಸಿದ 95 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು!

 

                   ಅಮರಾವತಿ: ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶ ಸರ್ಕಾರ ನೀಡಿದ್ದ ನಿವೇಶನ ಪಡೆದಿದ್ದ 95,000ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳು ಇದೀಗ ವಿವಿಧ ಕಾರಣಗಳಿಗಾಗಿ ಮನೆ ನಿರ್ಮಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ.

                   ಯೋಜನೆಯಡಿ ಪ್ರಸ್ತಾಪಿಸಲಾದ ಬಡಾವಣೆಗಳು ಜನವಸತಿ ಪ್ರದೇಶದಿಂದ ದೂರ ಅಥವಾ ಸ್ಮಶಾನಕ್ಕೆ ಹತ್ತಿರವಾಗಿರುವುದರಿಂದ ಪರ್ಯಾಯ ಸ್ಥಳಗಳಲ್ಲಿ ನಿವೇಶನಗಳನ್ನು ಒದಗಿಸುವಂತೆ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಇದೀಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪರ್ಯಾಯ ನಿವೇಶನಕ್ಕೆ ಸರ್ಕಾರಕ್ಕೆ  800 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.

                   ಜನತೆಯ ಬೇಡಿಕೆ ಈಡೇರಿಸಬೇಕಾದರೆ ಖಾಸಗಿಯವರಿಂದ 2000 ಎಕರೆಗೂ ಹೆಚ್ಚು ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ, ಈ ಹಿಂದೆ ನಾವು ಬಿಟ್ಟುಕೊಟ್ಟಿದ್ದು ಸರಕಾರಿ ಭೂಮಿಯಾಗಿತ್ತು, ಕೆಲ ಫಲಾನುಭವಿಗಳು ತಮ್ಮ ತಮ್ಮ ಗ್ರಾಮಗಳಲ್ಲಿಯೇ ನಿವೇಶನ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ವಸತಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                 95,106 ಫಲಾನುಭವಿಗಳು ನಿವೇಶನ (ತಲಾ 1.5 ಸೆಂಟ್ಸ್) ಪಡೆಯಲು ಮತ್ತು ಮನೆ ನಿರ್ಮಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆಂದು ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ.

                 ಕನಿಷ್ಠ ಶೇ.30ರಷ್ಟು ಪ್ರಕರಣಗಳಲ್ಲಿ ಹೊಸ ವಸತಿ ಬಡಾವಣೆಗಳು ಸ್ಮಶಾನ ಸ್ಥಳಗಳಂತಹ ಸೂಕ್ತವಲ್ಲದ ಪ್ರದೇಶಗಳ ಬಳಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                ಇಂತಹ ಸಮಸ್ಯೆಗಳು ಅನೇಕ ಪ್ರಧಾನ ಪಟ್ಟಣಗಳಲ್ಲಿ ಮತ್ತು ಕೆಲವು ಅರೆ-ನಗರ ಪ್ರದೇಶಗಳಲ್ಲಿಯೂ ಇದೆ. ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಎರಡು-ಮೂರು ಗ್ರಾಮಗಳ ಜನರನ್ನು ಒಂದೆಡೆ ಸೇರಿಸಿ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಯತ್ನಿಸಿದ್ದಾರೆಂದಿದ್ದಾರೆ.

                   ಈ ನುವೆ ವಿಶೇಷ ಮುಖ್ಯ ಕಾರ್ಯದರ್ಶಿ (ವಸತಿ) ಅಜಯ್ ಜೈನ್ ಅವರು ಮಾತನಾಡಿ, ಸುಮಾರು 50,000 ಫಲಾನುಭವಿಗಳು ಮಾತ್ರ ಸಮಸ್ಯೆ ಬಗ್ಗೆ ತಿಳಿಸಿದ್ದಾರೆಂದು ಸಮರ್ಥಿಸಿಕೊಂಡಿದ್ದಾರೆ.

                 ಸಮೀಕ್ಷೆ ನಡೆಸಿ ಮನೆ ನಿವೇಶನಕ್ಕೆ ಪರ್ಯಾಯ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಸಮೀಕ್ಷೆ ಬಳಿಕ ಭೂಸ್ವಾಧೀನ ಪೂರ್ಣಗೊಳಿಸಿ ಫಲಾನುಭವಿಗಳಿಗೆ ನಿವೇಶನ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

                  ಏತನ್ಮಧ್ಯೆ, ಪ್ರಕಾಶಂ ಮತ್ತು ಅನಂತಪುರಮು ಜಿಲ್ಲೆಗಳಲ್ಲಿ ಇನ್ನೂ 24,068 ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸರ್ಕಾರ ರೂ. 251 ಕೋಟಿ ಅಂದಾಜು ವೆಚ್ಚದಲ್ಲಿ ಸುಮಾರು 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮಂಜೂರು ಮಾಡಿದ ನಿವೇಶನಗಳು ದಾವೆಯಲ್ಲಿರುವ ಕಾರಣ ಹೊಸದಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

                 ಎರಡು ಜಿಲ್ಲೆಗಳಲ್ಲಿ ಪರ್ಯಾಯ ಜಮೀನುಗಳನ್ನು ಗುರುತಿಸಲಾಗಿದ್ದು, ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

                   ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ‘ಪೆಡಲಂಡರಿಕಿ ಇಲ್ಲು’ (ಬಡವರಿಗೆಲ್ಲ ಮನೆ) ಕಾರ್ಯಕ್ರಮದಡಿ ಸುಮಾರು 25 ಲಕ್ಷ ಮಹಿಳಾ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸಿ ಹೊಸ ಬಡಾವಣೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು.

                   ರಾಜ್ಯ ಸರ್ಕಾರವು ಇದನ್ನು ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯೊಂದಿಗೆ ಪರಿಚಯಿಸಿತ್ತು. ಇದರಂತೆ ಮೊದಲ ಹಂತದಲ್ಲಿ 18.63 ಲಕ್ಷ ಮನೆಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ, ಜೂನ್ 2023 ರೊಳಗೆ ಅವುಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

                   ಆದರೆ, ಕಾನೂನು ಸಮಸ್ಯೆ ಮತ್ತು ಫಲಾನುಭವಿಗಳ ನಿರಾಸಕ್ತಿಯಿಂದಾಗಿ ಸುಮಾರು ಎರಡು ಲಕ್ಷ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.

                  ನಿರ್ಮಾಣ ಕಾರ್ಯ ಆರಂಭವಾದ 16.67 ಲಕ್ಷ ಮನೆಗಳಲ್ಲಿ ಕೇವಲ 6.96 ಲಕ್ಷ ಮಾತ್ರ ನೆಲಮಾಳಿಗೆ ಮತ್ತು ಮೇಲಿನ ಹಂತವನ್ನು ಎರಡು ವರ್ಷಗಳಲ್ಲಿ ಕಟ್ಟಲಾಗಿದೆ. 2.09 ಲಕ್ಷ ಮನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

                   ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ವಸತಿ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರವು ಆಂಧ್ರಪ್ರದೇಶ ರಾಜ್ಯಕ್ಕೆ 5,172 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆತ ಆದರೆ 1,140 ಕೋಟಿ ರೂಪಾಯಿಗಳನ್ನು ಇದರ ಉದ್ದೇಶಕ್ಕಾಗಿ ಖರ್ಚು ಮಾಡಿಲ್ಲ. ರಾಜ್ಯ ಸರ್ಕಾರವೂ ವಸತಿ ಕಾಮಗಾರಿಗೆ ತನ್ನ ಪಾಲಿನ 888 ಕೋಟಿ ರೂ.ಗಳನ್ನು ಬಿಡುಗಡೆ ಮಾಡದಿರುವುದು ಅಭಿವೃದ್ಧಿ ಕಾರ್ಯಕ್ಕೆ ತೀವ್ರ ಕುಂಠಿತವಾಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

                 2,028 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ಬಳಕೆ ಮಾಡಿಕೊಳ್ಳದ ಹೊರತು ಕೇಂದ್ರದಿಂದ ಇನ್ನೂ 2,488 ಕೋಟಿ ರೂ. ಅನುದಾನ ಬಿಡುಗಡೆಯಾಗುವುದಿಲ್ಲ. ಇದರಿಂದ ಯೋಜನೆಗೆ ಧಕ್ಕೆ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಮಾಡಿದ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ರೂ 120 ಕೋಟಿ ಪಾವತಿಸಬೇಕಿದೆ, ವಸತಿ ಇಲಾಖೆಯು ಯೋಜನೆಗೆ ರೂ.220 ಕೋಟಿ ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರೂ ಕೂಡ ಸರ್ಕಾರ ಕಾರ್ಯಕ್ರಮವನ್ನು "ಆಟೋಪೈಲಟ್ ಮೋಡ್" ನಲ್ಲಿಟ್ಟಿದೆ ಎಂದು ತಿಳಿಸಿದ್ದಾರೆ.


 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries