HEALTH TIPS

ಅಮೃತಸರ: ಮಾದಕವಸ್ತು ಸಾಗಿಸುತ್ತಿದ್ದ ಡ್ರೋನ್‌ ಹೊಡೆದುರುಳಿಸಿದ ಯೋಧರು

 

         ಚಂಡೀಗಢ: ಅಮೃತಸರದ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಬಳಿ ಮಾದಕವಸ್ತು ಸಾಗಿಸುತ್ತಿದ್ದ ಡ್ರೋನ್‌ ಅನ್ನು ಯೋಧರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

             'ಬಿಎಸ್‌ಎಫ್‌ ಯೋಧರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಂಜಾಬ್‌ನ ಅಮೃತಸರ ಜಿಲ್ಲೆಯ ಕಕ್ಕರ್‌ ಗ್ರಾಮದಲ್ಲಿ ಡ್ರೋನ್‌ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಅದರಲ್ಲಿ ಸಾಗಿಸುತ್ತಿದ್ದ ಐದು ಕೆ.ಜಿ.ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ' ಎಂದು ವಿವರಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದೂ ಹೇಳಿದ್ದಾರೆ.

                'ಡ್ರೋನ್‌ನಲ್ಲಿ ಅಮೆರಿಕ ಮತ್ತು ಚೀನಾ ನಿರ್ಮಿತ ಬಿಡಿಭಾಗಗಳು ಪತ್ತೆಯಾಗಿವೆ' ಎಂದು ಡಿಜಿಪಿ ಗೌರವ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries