HEALTH TIPS

‘ಪಾಸ್ವರ್ಡ್ ಕ್ಯಾಂಪ್’ ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನ ಶಿಬಿರ ಸಂಪನ್ನ: ಮಕ್ಕಳಿಗೆ ಹೊಸ ಅನುಭವ ನೀಡಿದ ಏಕದಿನ ಶಿಬಿರ


            ಕುಂಬಳೆ:  ಕೊಡ್ಯಮೆ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕಲಿಕೆ ಮತ್ತು ಮನರಂಜನೆಯನ್ನು ಮೇಳೈಸಿ ಆಯೋಜಿಸಿದ್ದ ‘ಪಾಸ್ ವರ್ಡ್ ವ್ಯಕ್ತಿತ್ವ ವಿಕಸನ ವೃತ್ತಿ ಮಾರ್ಗದರ್ಶನ ಶಿಬಿರ’ವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಶಿರಿಯಾ ನದಿಯ ತಂಗುದಾಣದಲ್ಲಿ ಆಯೋಜಿಸಿದ್ದ ಒಂದು ದಿನದ ಶಿಬಿರ ಮಕ್ಕಳಿಗೆ ವಿಶಿಷ್ಟ ಅನುಭವ ನೀಡಿತು.
             ವಿದ್ಯಾರ್ಥಿಗಳು ಪರೀಕ್ಷೆಯ ಭಯ, ಮಾನಸಿಕ ಒತ್ತಡವನ್ನು ಹೋಗಲಾಡಿಸಲು ಆಟವಾಡಿ, ಮೋಜು ಮಸ್ತಿ ಮಾಡುತ್ತಾ, ನಗು ಚೆಲ್ಲುತ್ತಾ ಶಿಬಿರವನ್ನು ಆನಂದಿಸಿದರು.
          ಅಲ್ಪಸಂಖ್ಯಾತರ ಯುವ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಗೀತಾ ಶಿಬಿರದ ವಿವರಣೆ ನೀಡಿದರು.ಅಲ್ಪಸಂಖ್ಯಾತ ಸೆಲ್ ಜೂನಿಯರ್ ಅಧೀಕ್ಷಕಿ ಬಿಂದು ಥಾಮಸ್, ಅಬ್ದುಲ್ ರಹಿಮಾನ್, ನಿರ್ಮಲ್ ಕುಮಾರ್ ಕಾರಡ್ಕ, ನಿಸಾರ್ ಪೆರ್ವಾಡ್ ನೇತೃತ್ವ ವಹಿಸಿದ್ದರು. ಶಾಲೆಯ ಹಳೆ ವಿದ್ಯಾರ್ಥಿಗಳಾದ ಮಂಜೇಶ್ವರ ತಾಲೂಕು ಕಛೇರಿಯ ಗುಮಾಸ್ತ ಕೆ.ಅನಸ್ ಹಾಗೂ ಕೊಡ್ಯಮೆ ಯು.ಪಿ.ಶಾಲೆಯ ಶಿಕ್ಷಕಿ ಫಾತಿಮತ್ ಹನೀನಾ ಮಕ್ಕಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಿ.ಟಿ.ಎ ಅಧ್ಯಕ್ಷ ಅಶ್ರಫ್ ಕೊಡ್ಯಮೆ ಪ್ರಮಾಣ ಪತ್ರ ವಿತರಿಸಿದರು. .ಉಪಾಧ್ಯಕ್ಷ ಕೆ.ಅಬ್ಬಾಸಲಿ, ಅಬ್ಬಾಸ್ ಕೊಡ್ಯಮೆ, ಕಾರ್ಯನಿರ್ವಾಹಕ ಸದಸ್ಯರಾದ ಸಿ.ಎಚ್.ಮಹಮ್ಮದ್, ಆಯೇಷತ್ ಖುರೈಶಿ, ಸಫಿಯಾ ಬಂಬ್ರಾಣ ಮಾತನಾಡಿದರು. ಮುಖ್ಯ ಶಿಕ್ಷಕಿ ಬೀನಾ ಆಯೇμÁ ಸ್ವಾಗತಿಸಿ, ಗಿರೀಶ್ ವಂದಿಸಿದರು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries