HEALTH TIPS

ಹಿಂದೂ ಮಹಾಸಾಗರದಲ್ಲಿ ನೌಕಾಪಡೆಯ ಸಮರಾಭ್ಯಾಸ

 

       ನವದೆಹಲಿ: ಚೀನಾ ಸೇನೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಲ ವೃದ್ಧಿಸಿಕೊಳ್ಳುತ್ತಿರುವ ಬೆನ್ನಲ್ಲೇ ಭಾರತೀಯ ನೌಕಾಪಡೆಯು ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈ ಪ್ರದೇಶದಲ್ಲಿ ಭಾರಿ ಸಮರಾಭ್ಯಾಸ ನಡೆಸಲು ನಿರ್ಧರಿಸಿದೆ.

             'ಎರಡು ವರ್ಷಕ್ಕೊಮ್ಮೆ ನಡೆಯುವ ಥಿಯೇಟರ್‌ ಲೆವಲ್‌ ಆಪರೇಷನಲ್‌ ರೆಡಿನೆಸ್‌ ಎಕ್ಸರ್‌ಸೈಸ್‌ (ಟ್ರೊಪೆಕ್ಸ್‌) ನೌಕಾಪಡೆಯ ಕಾರ್ಯಾಚರಣೆಯ ‍ಪರಿಕಲ್ಪನೆಯನ್ನು ಮೌಲ್ಯೀಕರಿಸುವ ಹಾಗೂ ಪರಿಷ್ಕರಿಸುವ ಗುರಿ ಹೊಂದಿದೆ. ಜೊತೆಗೆ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶ ಒಳಗೊಂಡಿದೆ' ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

                'ಜನವರಿಯಿಂದ ಮಾರ್ಚ್‌ವರೆಗೆ ನಡೆಯುವ 'ಟ್ರೊಪೆಕ್ಸ್‌'ನಲ್ಲಿ ನೌಕಾ ಪಡೆ ಹಾಗೂ ಕರಾವಳಿ ಕಾವಲು ಪಡೆಯ ಡೆಸ್ಟ್ರಾಯರ್‌ಗಳು, ಯುದ್ಧನೌಕೆಗಳು ಹಾಗೂ ಅವುಗಳ ಬೆಂಗಾವಲು ಹಡಗುಗಳು, ಸಬ್‌ಮರಿನ್‌ಗಳು ಹಾಗೂ ಯುದ್ಧ ವಿಮಾನಗಳು ಭಾಗವಹಿಸಲಿವೆ' ಎಂದು ನೌಕಾಪಡೆಯ ವಕ್ತಾರ, ಕಮಾಂಡರ್‌ ವಿವೇಕ್‌ ಮಧವಾಲ್‌ ತಿಳಿಸಿದ್ದಾರೆ.

               'ಸಮುದ್ರದೊಳಗೆ ಹಾಗೂ ಬಂದರು ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ತಾಲೀಮು ನಡೆಸಲಾಗುತ್ತದೆ. ಸೇನಾ ಪಡೆ, ವಾಯುಪಡೆ ಹಾಗೂ ಕರಾವಳಿ ಕಾವಲು ಪಡೆಗಳೊಂದಿಗೆ ಕಾರ್ಯಾಚರಣೆ ಕುರಿತಾದ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೂ ಟ್ರೊಪೆಕ್ಸ್‌ ನೆರವಾಗಲಿದೆ' ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries