HEALTH TIPS

ಉಬ್ರಂಗಳದಲ್ಲಿ ಪಾಟು ಉತ್ಸವ , ಶ್ರೀ ದೇವರ ಬಲಿ, ಬೆಡೆಸೇವೆ


             ಬದಿಯಡ್ಕ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ಸೋಮವಾರ ಸಂಪನ್ನಗೊಂಡಿದ್ದು ಮಂಗಳವಾರ ಜಾತ್ರೋತ್ಸವದ ಅಂಗವಾಗಿ ವಿಶೇಷ ಪಾಟು ಉತ್ಸವ ಆರಂಭವಾಯಿತು. ಬೆಳಗ್ಗೆ ಉಷಃಪೂಜೆ, ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ವಿಶೇಷ ಪಾಟು ಉತ್ಸವದ ದೀಪಪ್ರಜ್ವಲನೆ, ಪೂಜಾದಿ ಕಾರ್ಯಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಶ್ರೀ ಶಾಸ್ತಾರ ಸನ್ನಿಧಿಯಿಂದ ಪಾಟುಉತ್ಸವ ಮಂಟಪಕ್ಕೆ ದೀಪ, ಆಯುಧÀ, ಆಭರಣಗಳನ್ನು ಚೆಂಡೆ, ವಾದ್ಯಘೋಷಗಳೊಂದಿಗೆ ತರಲಾಯಿತು. ಪೂಜಾದಿಕಾರ್ಯಗಳ ನಂತರ ಪ್ರಾರ್ಥನೆಯನ್ನು ನೆರವೇರಿಸಲಾಯಿತು.



       ಡಿ.4 ಬುಧವಾರ ಬೆಳಗ್ಗೆ 9.30ರಿಂದ `ಕಳೋತ್ಲರಿ' ಪಾಟು ಉತ್ಸವದ ಮಂಗಲೋತ್ಸವ, ಶ್ರೀದೇವರಿಗೆ ನವಕಲಶಾಭಿಷೇಕ, 10.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಪಾದಪೂಜೆ, ಭಿಕ್ಷಾಸೇವೆ, ಮಧ್ಯಾಹ್ನ 11.30ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಮಹಾಪ್ರಸಾದ, ಮಹಾಅನ್ನಸಂತರ್ಪಣೆ ನಡೆಯಿತು, ಸಂಜೆ 6 ಗಂಟೆಯಿಂದ ಯಕ್ಷಕೂಟ ಕದ್ರಿ ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸುದರ್ಶನ ಗರ್ವಭಂಗ, ಭಾರ್ಗವ ವಿಜಯ ಯಕ್ಷಾನ ಪ್ರದರ್ಶನಗೊಂಡಿತು. ರಾತ್ರಿ ಮಹಾಪೂಜೆ, 9 ರಿಂದ ಶ್ರೀಭೂತಬಲಿ ಉತ್ಸವ, ಬೆಡಿಸೇವೆ, ದರ್ಶನಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು. ಇಂದು(ಗುರುವಾರ) ಬೆಳಗಿನ ಜಾವ ಶ್ರೀಧೂಮಾವತಿ ದೈವದ ಕೋಲ ಆರಂಭ, 6 ಕ್ಕೆ ದೈವÀದ ಪ್ರಸಾದ ವಿತರಣೆಯೊಂದಿಗೆ ಪಾಟು ಉತ್ಸವವು ಮಂಗಲವಾಗಲಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries