HEALTH TIPS

ಕಾಸರಗೋಡು ಕನ್ನಡಿಗರಿಗೆ ಮತ್ತೊಂದು ಪ್ರಹಾರ: ಕನ್ನಡ ಮಾಧ್ಯಮದಿಂದ ಸಂಸ್ಕøತ ಶಿಕ್ಷಕರಾಗಲು ಇಲ್ಲ ಅವಕಾಶ


        ಕಾಸರಗೋಡು: ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಸಂಸ್ಕøತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳಿದ್ದು, ಕಿರಿಯ ಪ್ರಾಥಮಿಕ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಯುವ ಅವಕಾಶ ಇಲ್ಲಿಯ ವಿದ್ಯಾರ್ಥಿಗಳಿಗಿದೆ. ಹಲವು ಹೈಯರ್ ಸೆಕೆಂಡರಿ ಶಾಲೆಗಳಲ್ಲೂ ಸಂಸ್ಕøತ ಶಿಕ್ಷಣ ಮುಂದುವರಿಸುವ ಅವಕಾಶವೂ ಸಾಕಷ್ಟಿದೆ. ಆದರೆ, ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳ ಪೈಕಿ ಸಂಸ್ಕøತದಲ್ಲಿ ಶಿಕ್ಷಕ ತರಬೇತಿ(ಟಿಟಿಸಿ) ಮಾಡಲು ಪ್ರಸ್ತುತ ಅವಕಾಶಗಳಿಲ್ಲದೆ ಅನೇಕರು ಸಂಕಷ್ಟಕ್ಕೀಡಾಗಿರುವುದು ಗಮನಕ್ಕೆ ಬಂದಿದೆ. ಇದುವರೆಗೆ ಪರೀಕ್ಷಾಭವನ್ ನಡೆಸುತ್ತಿದ್ದ ಸಂಸ್ಕøತ ಶಿಕ್ಷಕರಾಗಲಿರುವ ಸರ್ಟಿಫಿಕೇಟ್ ಕೋರ್ಸ್ ಕನ್ನಡ ವಿದ್ಯಾರ್ಥಿಗಳಿಗೆ ಯಾವುದೇ ಭಾಷೆಯ ತೊಡಕಿಲ್ಲದೆ ಸುಲಭವಾಗಿ ಕಲಿಯಬಹುದಿತ್ತು. ಆದರೆ ಈ ಕೋರ್ಸ್‍ನ್ನು ಪ್ರಸ್ತುತ ಪರೀಕ್ಷಾ ಭವನದಿಂದ ಹೊರತುಪಡಿಸಲಾಗಿದ್ದು, ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರ(ಡಯಟ್)ಗೆ ಇದನ್ನು ವರ್ಗಾಯಿಸಿರುವುದರಿಂದ ಕನ್ನಡ ಮೂಲದಿಂದ ತೆರಳುವ ಸಂಸ್ಕøತ ಶಿಕ್ಷಕ ಆಕಾಂಕ್ಷಿಗಳಿಗೆ ತೊಡಕಾಗಿದೆ. ಡಯಟ್ ಮೂಲಕ ನಡೆಸುವ ಸಂಸ್ಕøತ ಟಿಟಿಸಿ ಕೋರ್ಸಿಗೆ ಕನ್ನಡ ವಿದ್ಯಾರ್ಥಿಗೆ ಸೇರಲು ಸಾಧ್ಯವಿಲ್ಲ. ಮಲಯಾಳ ವಿದ್ಯಾರ್ಥಿಗಳಿಗೆ ಮಾತ್ರ ಸಂಸ್ಕøತ ತರಬೇತಿ ಪಡೆಯುವ, ಕನ್ನಡ ವಿದ್ಯಾರ್ಥಗಳು ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.
    ಕಾಸರಗೋಡಲ್ಲಿ ಮಾಯಿಪ್ಪಾಡಿ ಅಧ್ಯಾಪಕ ತರಬೇತಿ ಕೇಂದ್ರ ಮಾತ್ರ ಇದ್ದು, ಇಲ್ಲಿ ಸಂಸ್ಕøತ ಶಿಕ್ಷಕ ತರಬೇತಿಗೆ ಅನುಮತಿ ನೀಡಲಾಗಿಲ್ಲ. ಬದಲಿಗೆ ಕೋಝಿಕ್ಕೋಡ್ ನ ವಡಗರದಲ್ಲಿ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ಸಂಸ್ಕøತ ಶಿಕ್ಷಕ ತರಬೇತಿ ಪಡೆಯುವವರು ಒಂದು ಪತ್ರಿಕೆ ಮಲೆಯಾಳಂ ನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕಿದ್ದು, ಇದು ಕಾಸರಗೋಡಿನ ಕನ್ನಡ ಮಾಧ್ಯಮದಿಂದ ತೆರಳುವ ಶಿಕ್ಷಕ ಶಿಕ್ಷಣಾರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಕನ್ನಡ ವಿದ್ಯಾರ್ಥಿಗಳಿಗೆ ಕೇರಳ ರಾಜ್ಯದಲ್ಲಿ ಸಂಸ್ಕøತ ಟಿಟಿಸಿ ಕೋರ್ಸನ್ನು ಮಾಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ವಡಗರ ಜಿಲ್ಲಾ ಟೀಚರ್ ಟ್ರೈನಿಂಗ್ ಸೆಂಟರ್ ನಲ್ಲಿ ನಡೆದ ಸಂಸ್ಕೃತ ಟಿಟಿಸಿ ಇಂಟವ್ರ್ಯೂನಲ್ಲಿ ಭಾಗವಹಿಸಿದ ಓರ್ವ ವಿದ್ಯಾರ್ಥಿಗೆ ಸೀಟು ನಿರಾಕರಿಸಿದ್ದಾರೆ. ಕಾರಣ ಮಲಯಾಳ ಭಾಷೆಯ ವಿದ್ಯಾರ್ಥಿಗಳಿಗೆ ಮಾತ್ರ ಸಂಸ್ಕøತ ಟಿಟಿಸಿಯನ್ನು ಮಾಡಬಹುದಾದ ಕಾರಣ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಕಾರಣ ಈ ತರಬೇತಿಗೆ ಅವಕಾಶ ಸಾಧ್ಯವಿಲ್ಲ ಎಂಬುದಾಗಿ ಅಧಿಕೃತರು ತಿಳಿಸಿದ್ದಾರೆ. ಕೇರಳ ರಾಜ್ಯದಲ್ಲಿ ಕನ್ನಡ ಕಲಿತÀ ವಿದ್ಯಾರ್ಥಿಗೆ ಸಂಸ್ಕøತ ಭಾμÉಯಲ್ಲಿ ಟಿಟಿಸಿ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಸಂಸ್ಕøತ ಶಿಕ್ಷಕರಾಗಲು ಸಹಜವಾಗಿ ಸಾಧ್ಯವಿಲ್ಲ. ಕೇರಳ ಸರ್ಕಾರ ಪರೀಕ್ಷಾ ಭವನ ಮತ್ತು ವಿದ್ಯಾಭ್ಯಾಸ ಇಲಾಖೆ ಮುತುವರ್ಜಿವಹಿಸಿ ಕನ್ನಡ ಭಾಷೆ ಕಲಿತ ವಿದ್ಯಾರ್ಥಿಗಳಿಗೂ ಸಂಸ್ಕøತ ಟಿಟಿಸಿ ತರಬೇತಿ ಪಡೆಯುವ ಅವಕಾಶವನ್ನು ಮಾಡಿಕೊಡಬೇಕಾಗಿದೆ.
     ಪ್ರಸ್ತುತ ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೇಲಿಂದ ಮೇಲೆ ಕಲಿಕೆಗೆ ಸವಾಲುಗಳು ಹೆಚ್ಚುತ್ತಿವೆ. ಕಳೆದ ಹಲವು ವರ್ಷಗಳಿಂದ ಕನ್ನಡ ಮಾಧ್ಯಮದ ವಿವಿಧ ಪಾಠ ಬೋಧನೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ತುರುಕುವ ಮೂಲಕ ಪ್ರತಿಕೂಲ ವಾತಾವರಣ ಸೃಷ್ಟಿಗೆ ವಿದ್ಯಾಭ್ಯಾಸ ಇಲಾಖೆ ನಿರಂತರ ಪ್ರಯತ್ನಿಸುತ್ತಿದ್ದು, ಕನ್ನಡಿಗರ ಹೋರಾಟದ ಫಲವಾಗಿ ಕೊನೆಗೂ ಕನ್ನಡ ಬಾರದ ಅಂತಹ ಶಿಕ್ಷಕರನ್ನು ಹಿಮ್ಮೆಟ್ಟಿಸುವಲ್ಲಿ ಸಫಲತೆ ಕಂಡುಬಂದರೂ ಪ್ರತಿವರ್ಷವೂ ಇದು ಮತ್ತೆ-ಮತ್ತೆ ಮರುಕಳಿಸುತ್ತಿದೆ. ಈ ಮಧ್ಯೆ ಹೊಸ ಭಾಷೆಯೊಂದರ ಕಲಿಕೆಗೆ ಮಾತೃಭಾಷೆಯ ಮೂಲಕವೇ ತೊಡಗಿಸಬೇಕೆಂಬ ಶಿಕ್ಷಣ ತಜ್ಞರ ಎಲ್ಲಾ ಸಂಶೋಧನೆಗಳನ್ನೂ ಗಾಳಿಗೆ ತೂರಿ ದಶಕಗಳಿಂದ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಸ್ಕøತ ಶಿಕ್ಷಕರನ್ನಾಗಿ ಹೆಚ್ಚೆಚ್ಚು ಮಲೆಯಾಳಿಗರನ್ನೇ ನೇಮಕಗೊಳಿಸುತ್ತಿರುವುದು ಹೊಸತಲ್ಲ. ಆದರೂ, ಒಂದಷ್ಟು ಕನ್ನಡ ಮಾಧ್ಯಮದಿಂದ ಸಂಸ್ಕøತ ಶಿಕ್ಷಕರು ಅಲ್ಲಲ್ಲಿ ಭಾರೀ ಹೋರಾಟದ ಮೂಲಕ ಸೇವೆಗೈಯ್ಯುತ್ತಿರುವ ಮಧ್ಯೆ ಇದೀಗ ಬಂದೊದಗಿರುವ ಮಹಾವಿಪತ್ತು ಕೇವಲ ಸಂಸ್ಕøತ ಶಿಕ್ಷಕ ಆಕಾಂಕ್ಷಿಗಳನ್ನಷ್ಟೇ ಅಲ್ಲದೆ, ಜಿಲ್ಲೆಯ ನೂರಾರು ಕನ್ನಡ ಮಾಧ್ಯಮದ ಸಂಸ್ಕøತ ಕಲಿಕೆಯ ವಿದ್ಯಾರ್ಥಿಗಳ ಮೇಲೂ ಕೆಟ್ಟ ಪರಿಣಾಮ ಬೀರದೆ ಇರದು ಎಂಬುದು ನಿಸ್ಸಂಶಯ. ಈ ನಿಟ್ಟಿನಲ್ಲಿ ಶಿಕ್ಷಣ ಅಧಿಕೃತರು, ಮಕ್ಕಳ ಪೋಷಕರು, ಸಂಸ್ಕøತ ಶಿಕ್ಷಕ ಆಕಾಂಕ್ಷಿಗಳು, ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಂಡು ಈವರ್ಷವೇ ಈ ಸವಾಲನ್ನು ನಿವಾರಿಸಬೇಕಾಗಿದೆ.



       ಅಭಿಮತ:
ಸಮಸ್ಯೆಗೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸರ್ಕಾರಿ ಆದೇಶ ಮತ್ತು ಈಗ ಅನುಸರಿಸುತ್ತಿರುವ ಕ್ರಮಗಳನ್ನು ಅಧ್ಯಯನ ನಡೆಸಿ ಅಧಿಕೃತರಿಗೆ ತಿಳಿಸಲಾಗುವುದು. ಯಾರಿಗೂ ಕಲಿಕೆಗೆ ಅವಕಾಶ ನಿರಾಕರಿಸಲ್ಪಡಬಾರದೆಂಬ ಮೂಲ ಸಿದ್ದಾಂತ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
                        -ಪದ್ಮಕುಮಾರ್.ಟಿ.ಪಿ.
                         ಸಂಸ್ಕøತ ಟೀಚರ್ಸ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷಕರು. ಕಾಸರಗೋಡು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries