HEALTH TIPS

ಹಸಿರು ಜಲಜನಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

 

    ನವದೆಹಲಿ: ದೇಶದಲ್ಲಿ ಜಲಜನಕ ಉತ್ಪಾದನೆಯನ್ನು ಉತ್ತೇಜಿಸುವ 'ರಾಷ್ಟ್ರೀಯ ಹಸಿರು ಜಲಜನಕ ಕಾರ್ಯಕ್ರಮ'ಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಹಲವು ಹಂತಗಳಲ್ಲಿ ಒಟ್ಟು ₹19,744 ಕೋಟಿಯನ್ನು ವೆಚ್ಚ ಮಾಡಲು ಸಚಿವ ಸಂಪುಟವು ಅನುಮೋದನೆ ನೀಡಿದೆ.

         2030ರ ವೇಳೆಗೆ ಹಲವು ಮೈಲುಗಲ್ಲುಗಳನ್ನು ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹಾಕಿಕೊಂಡಿದೆ.

           ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾದ ಜಲಜನಕವನ್ನು ಹಸಿರು ಜಲಜನಕ ಎಂದು ಕರೆಯಲಾಗುತ್ತದೆ. ಹಸಿರು ಜಲಜನಕಕ್ಕೆ ಬೇಡಿಕೆ ಹೆಚ್ಚಿಸುವುದು, ಉತ್ಪಾದನೆ, ಬಳಕೆ ಹಾಗೂ ರಫ್ತು ಹೆಚ್ಚಿಸಲು ನೆರವು ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮದ ಅಡಿಯಲ್ಲಿ, ‌ದೇಶೀಯವಾಗಿ ಜಲಜನಕ ಜನರೇಟರ್‌ಗಳ ತಯಾರಿಕೆ ಹಾಗೂ ಹಸಿರು ಜಲಜನಕ ಉತ್ಪಾದನೆ ಎಂಬ ಎರಡು ರೀತಿಯ ಹಣಕಾಸು ಉತ್ತೇಜನ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಧಿಕ ಪ್ರಮಾಣದಲ್ಲಿ ಜಲಜನಕ ಉತ್ಪಾದಿಸುವ ಹಾಗೂ ಬಳಕೆ ಮಾಡುವ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಹಸಿರು ಜಲಜನಕ ಕೇಂದ್ರಗಳನ್ನಾಗಿ (ಹಬ್) ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

            ದೇಶದಲ್ಲಿ ಹಸಿರು ಜಲಜನಕ ಉತ್ಪಾದನೆ ಹಾಗೂ ಬಳಕೆಯ ವಾತಾವರಣವನ್ನು ಉತ್ತೇಜಿಸಲು ಹಾಗೂ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಿರುವ ನೀತಿಗಳನ್ನು ರೂಪಿಸಲಾಗುತ್ತದೆ. ಸಶಕ್ತ ಮಾನದಂಡಗಳು ಹಾಗೂ ನಿಯಮಗಳ ಚೌಕಟ್ಟು ರಚನೆಯಾಗಲಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್‌ ಅಂಡ್ ಡಿ) ಸಂಬಂಧಿಸಿದ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ನಿಯಮಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ರೂಪಿಸಲಾಗುತ್ತದೆ. ಆರ್‌ ಅಂಡ್ ಡಿ ಯೋಜನೆಯು ಗುರಿ ಆಧರಿತ, ಸಮಯದ ಮಿತಿ ಹೊಂದಿರುವ, ಜಾಗತಿಕ ಸ್ಪರ್ಧಾತ್ಮಕ ತಾಂತ್ರಿಕತೆಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಇರಲಿದೆ.

2030ರ ವೇಳೆಗೆ...

* ದೇಶದಲ್ಲಿ ವಾರ್ಷಿಕ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು 50 ಲಕ್ಷ ಟನ್‌ಗಳಿಗೆ ಹೆಚ್ಚಿಸಲಾಗುತ್ತದೆ

* ಈ ಅವಧಿಯಲ್ಲಿ ಒಟ್ಟು ₹ 8 ಲಕ್ಷ ಕೋಟಿ ಹೂಡಿಕೆ

* ಈ ಕ್ಷೇತ್ರದಲ್ಲಿ ಒಟ್ಟು 6 ಲಕ್ಷ ಉದ್ಯೋಗಗಳ ಸೃಷ್ಟಿ

* ಪಳೆಯುಳಿಕೆ ಇಂಧನ ವಾರ್ಷಿಕ ಆಮದು ಮೊತ್ತದಲ್ಲಿ
₹1 ಲಕ್ಷ ಕೋಟಿಯಷ್ಟು ಇಳಿಕೆ

* ಇಂಗಾಲ ಆಧರಿತ ಮಾಲಿನ್ಯದ ಪ್ರಮಾಣವನ್ನು ವಾರ್ಷಿಕ 5 ಕೋಟಿ ಟನ್‌ಗಳಷ್ಟು ಇಳಿಕೆ ಮಾಡಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries