HEALTH TIPS

ಕಾಲೇಜಿನ ಎಲ್ಲ ಹುಡುಗಿಯರಿಗೂ ಬಾಯ್‌ಫ್ರೆಂಡ್ ಕಡ್ಡಾಯ: ನಕಲಿ ನೋಟಿಸ್ ಅವಾಂತರ

 

        ಪರದೀಪ್: ಒಡಿಶಾದ ಜಗತ್‌ಸಿಂಗ್‌ಪುರದ ಕಾಲೇಜೊಂದರಲ್ಲಿ ಎಲ್ಲ ವಿದ್ಯಾರ್ಥಿನಿಯರು ವ್ಯಾಲಂಟೈನ್ಸ್ ಡೇ ಹೊತ್ತಿಗೆ ಕಡ್ಡಾಯವಾಗಿ ಬಾಯ್‌ಫ್ರೆಂಡ್ ಹೊಂದಿರಬೇಕು ಎಂದು ಹಾಕಲಾಗಿದ್ದ ನಕಲಿ ನೋಟಿಸ್ ಭಾರಿ ಗೊಂದಲ ಸೃಷ್ಟಿಸಿತ್ತು.

            ನೋಟಿಸ್‌ನಲ್ಲಿ ಪ್ರಾಂಶುಪಾಲರ ಸಹಿಯನ್ನು ನಕಲು ಮಾಡಲಾಗಿತ್ತು.

ಎಸ್‌ವಿಎಂ ಕಾಲೇಜಿನಲ್ಲಿ ನಡೆದ ಈ ಅವಾಂತರದ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡಿದೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

                   'ನಕಲಿ ನೋಟಿಸ್ ಹಾಕಿರುವುದು ನಮ್ಮ ಗಮನಕ್ಕೆ ಬಂದಿತು. ಕೆಲವು ಕಿಡಿಗೇಡಿಗಳು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕಾಲೇಜಿನ ಗೌರವಕ್ಕೆ ಕುಂದು ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ'ಎಂದು ಪ್ರಾಂಶುಪಾಲ ಬಿಜಯ್ ಕುಮಾರ್ ಹೇಳಿದ್ದಾರೆ.

              ತಮ್ಮ ಘನತೆಗೆ ಧಕ್ಕೆ ತರಲು ಸಹಿ ನಕಲು ಮಾಡಲಾಗಿದೆ ಎಂದೂ ಅವರು ದೂರಿದ್ದು, ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries