HEALTH TIPS

ಅಮೆರಿಕ: ತ್ವರಿತ ವೀಸಾ ನೀಡಲು ವಿಶೇಷ ಕ್ರಮಗಳಿಗೆ ಚಾಲನೆ

 

              ನವದೆಹಲಿ: ಭಾರತದಲ್ಲಿ ವೀಸಾ ನೀಡುವ ಪ್ರಕ್ರಿಯೆಗೆ ಚುರುಕು ನೀಡುವ ಸಂಬಂಧ ಅಮೆರಿಕ ಕೆಲ ನೂತನ ಕ್ರಮಗಳಿಗೆ ಚಾಲನೆ ನೀಡಿದೆ.

                 'ವೀಸಾ ಕೋರಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನ ಆಯೋಜನೆ, ಕಾನ್ಸುಲೇಟ್‌ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

                  ಜ.21ರಂದು ಈ ನೂತನ ಕ್ರಮಗಳಿಗೆ ಚಾಲನೆ ನೀಡಲಾಗಿದೆ' ಎಂದು ಅಮೆರಿಕ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

              ಈ ಕ್ರಮದ ಭಾಗವಾಗಿ, ದೆಹಲಿಯಲ್ಲಿರುವ ರಾಯಭಾರ ಕಚೇರಿ, ಮುಂಬೈ, ಚೆನ್ನೈ, ಕೋಲ್ಕತ್ತ ಹಾಗೂ ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ ಕಚೇರಿಗಳಲ್ಲಿ 'ಶನಿವಾರ ವಿಶೇಷ ಸಂದರ್ಶನ' ಹೆಸರಿನ ಕಾರ್ಯಕ್ರಮದಡಿ ಜ.21ರಂದು ವೀಸಾ ನೀಡಲು ಸಂದರ್ಶನ ನಡೆಸಲಾಯಿತು ಎಂದೂ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries