HEALTH TIPS

ಜಿಲ್ಲೆಯಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡಲು ಕ್ರಮ: ಸಾಮಾಜಿಕ ಮಾಧ್ಯಮ ಪೋಸ್ಟ್‍ಗಳು, ರಾಷ್ಟ್ರೀಯ ಪಕ್ಷದ ಬೋರ್ಡ್ ಗಳು ಮೇಲ್ವಿಚಾರಣೆಯಲ್ಲಿ: ಡಿ.ಸಿ


           ಕಾಸರಗೋಡು:  ಜಿಲ್ಲೆಯಲ್ಲಿ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಯ ನ್ನುಂಟು ಮಾಡುವ ಚಟುವಟಿಕೆಗಳ ವಿರುದ್ಧ ತೀವ್ರ ಕ್ರಮಗಳನ್ನು ಕೈ ಗೊಳ್ಳುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಪೆÇಲೀಸರಿಗೆ ಸೂಚನೆ ನೀಡಿದ್ದಾರೆ.
           ಜನರ ನಡುವೆ ದ್ವೇಷ ಹರಡುವಂತಹ ಜಾತೀಯವಾದಿ ಪೋಸ್ಟರ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚರಪಡಿಸುವುದರ ವಿರುದ್ಧ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪೋಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್ ಗಳನ್ನು ಗಂಭೀರವಾಗಿ ಗಮನಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಧಾರ್ಮಿಕ ಸೌಹಾರ್ದತೆ ಕದಡುವ ಫಲಕಗಳಿದ್ದರೆ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ರಸ್ತೆ ಬದಿಗಳಲ್ಲಿ ಫಲಕ ಮತ್ತು ತೂಗು ಫಲಕಗಳನ್ನು ಹಾಕುವುದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಪಂಚಾಯತ್ ಉಪನಿರ್ದೇಶಕರು, ಪಂಚಾಯತ್ / ನಗರಸಭೆ ಕಾರ್ಯದರ್ಶಿಗಳು, ಲೋಕೋಪಯೋಗಿ (ರಸ್ತೆ) ಕಾರ್ಯಪಾಲಕ ಅಭಿಯಂತರರು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
             ವಿಶ್ವಕಪ್ ಫುಟ್‍ಬಾಲ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಕಟೌಟ್‍ಗಳು, ಫ್ಲೆಕ್ಸ್ ಬೋರ್ಡ್‍ಗಳು ಮತ್ತು ಬ್ಯಾನರ್‍ಗಳನ್ನು ತೆಗೆದುಹಾಕಲು ಸೂಚಿಸಿರುವರು. ಸರಕಾರಿ ಭೂಮಿಯಲ್ಲಿ ನಡೆಯುವ ಅನಧಿಕೃತ ನಿರ್ಮಾಣಗಳು, ಒತ್ತುವರಿಗಳನ್ನು ಪಂಚಾಯತ್ / ನಗರಸಭೆ ಕಾರ್ಯದರ್ಶಿಗಳು, ತಹ ಶೀಲ್ದಾರರು ಆರಂಭದಲ್ಲೇ ಪತ್ತೆ ಹಚ್ಚಿ ಕೇರಳ ಭೂ ಸಂರಕ್ಷಣಾ ಕಾಯಿದೆ ಹಾಗೂ ಕರಾವಳಿ ನಿಯಂತ್ರಣ ವಲಯ ನಿಯಮಗಳಡಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries