HEALTH TIPS

ನೇತಾಜಿಯವರ 'ಬೇಬಿ ಆಸ್ಟಿನ್' ಕಾರನ್ನು ಕಟಕ್‌ಗೆ ತರಲು ಮನವಿ

 

               ಭುವನೇಶ್ವರ: ಬಿಜು ಪಟ್ನಾಯಕ್ ಅವರ ಡಕೋಟಾ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಜನರ ವೀಕ್ಷಣೆಗೆ ಇರಿಸಲು ಒಡಿಶಾ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಸುಭಾಶ್ ಚಂದ್ರ ಬೋಸ್ ಅವರ ಕಾರನ್ನೂ ಸಹ ತರಲು ಒತ್ತಡ ಹೆಚ್ಚಾಗಿದೆ.

                    ಕಟಕ್‌ನ ಒಡಿಯಾ ಬಜಾರ್‌ನಲ್ಲಿರುವ ಸುಭಾಶ್ ಚಂದ್ರ ಬೋಸ್ ಅವರ ಜನ್ಮಸ್ಥಳ ಜಾನಕಿನಾಥ ಭವನಕ್ಕೆ ಅವರು ಬಳಸುತ್ತಿದ್ದ ಬೇಬಿ ಆಸ್ಟಿನ್ ಕಾರನ್ನು ತರಬೇಕೆಂಬ ಒತ್ತಾಯ ಕೇಳಿಬಂದಿದೆ.

                       ಕಟಕ್ ಮೂಲದ ನೇತಾಜಿ ಫೌಂಡೇಶನ್ ಈ ಕುರಿತಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

                  ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ ಚಂದ್ರ ಬೋಸ್ ಅವರು, 1930ರಿಂದ 1941ರವರೆಗೆ ಈ ಕಾರನ್ನು ಬಳಸಿದ್ದರು. ಇದೇ ಕಾರಲ್ಲಿ ಕೋಲ್ಕತ್ತದಿಂದ ಬರ್ಮಾಗೂ(ಇವತ್ತಿನ ಮ್ಯಾನ್ಮಾರ್) ತೆರಳಿದ್ದರು. ಆದರೆ, ಈಗ ಆ ಕಾರು ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

                  ಧಾನ್‌ಬಾದ್‌ನ ಕೋಕ್ ಪ್ಲಾಂಟ್‌ನಲ್ಲಿ ಕಾರು ಇರುವ ಬಗ್ಗೆ 2014ರಲ್ಲಿ ವರದಿಯಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

                'ಒಡಿಶಾ ಸರ್ಕಾರವು ಬಿಜು ಅವರ ಡಕೋಟ ವಿಮಾನವನ್ನು ಕೋಲ್ಕತ್ತದಿಂದ ಕಟಕ್‌ಗೆ ತಂದಿದೆ. ಅದೇ ರೀತಿ ಸರ್ಕಾರವು ನೇತಾಜಿ ಕಾರನ್ನೂ ತಂದು ಅವರ ಜನ್ಮಸ್ಥಳದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಬೇಕು. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವ ದೊಡ್ಡ ಗೌರವವಾಗಿದೆ' ಎಂದು ಫೌಂಡೇಶನ್‌ನ ಸಂಚಾಲಕರಾದ ಜಿನೇಶ್ ದಾಸ್ ಮತ್ತು ಬಿಕಿ ಚಕ್ರವರ್ತಿ ಹೇಳಿದ್ದಾರೆ.

              ನಿನ್ನೆ ನೇತಾಜಿ ಅವರ 126ನೇ ಜನ್ಮ ಜಯಂತಿಯಾಗಿದ್ದು, ಇದೇ ದಿನ ಅವರ ಕಾರನ್ನು ತರಬೇಕೆಂಬ ಒತ್ತಾಯ ಕೇಳಿಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries