HEALTH TIPS

ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರ ಪರವಾನಗಿ ರದ್ದುಪಡಿಸಲು ಕ್ರಮಕ್ಕೆ ಸೂಚನೆ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್


             ತಿರುವನಂತಪುರಂ: ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ನೀಡಿದ್ದಾರೆ.
         ರಸ್ತೆ ಸುರಕ್ಷತೆ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಪತ್ತೆಗೆ ಸಿದ್ಧಪಡಿಸಿರುವ ವಿಶೇಷ ವಾಹನಗಳ ಸೌಲಭ್ಯ ಬಳಸಿಕೊಳ್ಳುವ ಮೂಲಕ ಮದ್ಯ ಮತ್ತು ಮಾದಕ ದ್ರವ್ಯ ಸೇವಿಸುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
          ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಗಸ್ತು ಬಲಪಡಿಸಬೇಕು. ಹಾಟ್ ಸ್ಪಾಟ್‍ಗಳಲ್ಲಿ ಪೋಲೀಸ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು. ಪೋಲೀಸ್ ಮತ್ತು ಮೋಟಾರು ವಾಹನ ಇಲಾಖೆ ನಿಯಮಿತ ಮಧ್ಯಂತರದಲ್ಲಿ ಜಂಟಿ ತಪಾಸಣೆ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬೈಕ್ ಸ್ಟಂಟ್‍ಗಳನ್ನು ತಡೆಯಲು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಸೈಬರ್ ಗಸ್ತು ಬಲಪಡಿಸಬೇಕು. ಪುನರಾವರ್ತಿತ ಅಪರಾಧಿಗಳ ಪರವಾನಗಿ ರದ್ದುಪಡಿಸಲು ಕ್ರಮಕೈಗೊಳ್ಳಬೇಕು.
        ಸ್ಪೀಡ್ ಲಾಕ್ ತಪಾಸಣೆಯನ್ನು ಬಿಗಿಗೊಳಿಸಬೇಕು. ವಾಹನಗಳನ್ನು ನಿಗದಿತ ವೇಗದಲ್ಲಿ ಓಡಿಸುವಂತೆ ನೋಡಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯಿಂದ ಚಾಲಿತ ಕ್ಯಾಮೆರಾಗಳು ಸೇರಿದಂತೆ ಆಧುನಿಕ ವ್ಯವಸ್ಥೆಗಳನ್ನು ನಿಯಂತ್ರಿಸಿ. ಕ್ಯಾಮೆರಾವನ್ನು ಸ್ಥಾಪಿಸುವಾಗ ಕಾರ್ಯವನ್ನು ಖಚಿತಪಡಿಸಿಕೊಳ್ಳಬೇಕು. ನಂಬರ್ ಪ್ಲೇಟ್ ಗುರುತಿಸುವಿಕೆಗೆ ಸಹಾಯ ಮಾಡಲು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ.ಪಿ.ಆರ್.) ಕ್ಯಾಮೆರಾಗಳನ್ನು ಇಚಲನ್ ವ್ಯವಸ್ಥೆಗೆ ಜೋಡಿಸಬೇಕು ಮತ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು.
         ಭಾರಿ ವಾಹನಗಳಲ್ಲಿ ಡ್ಯಾಶ್‍ಬೋರ್ಡ್ ಕ್ಯಾಮೆರಾ ಅಳವಡಿಸುವ ಕುರಿತು ವಿಸ್ತೃತ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಪಾದಚಾರಿಗಳಿಗೆ ಅಪಘಾತವಾಗದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಬೇಕು. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಆಡಿಟ್ ನಡೆಸಬೇಕು ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಯೋಜಿಸಬೇಕು. ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟ್ರಾಫಿಕ್ ಎಂಜಿನಿಯರಿಂಗ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಬೇಕು.
         ಮೋಟಾರು ವಾಹನಗಳ ಇಲಾಖೆ ಮತ್ತು ಪೆÇಲೀಸರು ರಸ್ತೆ ಸುರಕ್ಷತಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಚಟುವಟಿಕೆಗಳನ್ನು ಯೋಜಿಸಬೇಕು. ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ಸರಕು ಸಾಗಣೆ ವಾಹನಗಳ ಓವರ್ ಲೋಡ್ ನಿಯಂತ್ರಣಕ್ಕೆ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಕಾನೂನು ಮಾಪನಶಾಸ್ತ್ರ, ಮೋಟಾರು ವಾಹನ ಇಲಾಖೆ ಹಾಗೂ ಪೆÇಲೀಸರು ಸಮನ್ವಯತೆಯಿಂದ ಕ್ರಮ ಕೈಗೊಳ್ಳಬೇಕು. ಓಚಿಣಠಿಚಿಞ ಇತ್ತೀಚಿನ ನೈಜ-ಸಮಯದ ಅಪಘಾತ ಡೇಟಾವನ್ನು ಒದಗಿಸಬೇಕು.
    ಹೊಸ ಅಪರಾಧಗಳನ್ನು ಕಾಂಪೌಂಡ್ ಅಪರಾಧಗಳ ಪಟ್ಟಿಯಲ್ಲಿ ಸೇರಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕ್ರಮಕೈಗೊಳ್ಳಬೇಕು. ಶಾಲಾ ಮಕ್ಕಳ ಮನರಂಜನಾ ಪ್ರವಾಸಕ್ಕೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ರಸ್ತೆ ಸುರಕ್ಷತೆ ಕುರಿತು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಬೇಕು. ಶಾಲಾ ಕಾಲೇಜುಗಳು, ಸಾರ್ವಜನಿಕ ಸಂಸ್ಥೆಗಳು ಇತ್ಯಾದಿಗಳ ಮೂಲಕ ಪ್ರಚಾರ ಕಾರ್ಯಗಳನ್ನು ಮಾಡಬೇಕು. ಹೈಯರ್ ಸೆಕೆಂಡರಿ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯನ್ನು ಸೇರಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
          ಸಾರಿಗೆ ಸಚಿವ ಆಂಟನಿ ರಾಜು, ರಾಜ್ಯ ಪೆÇಲೀಸ್ ವರಿಷ್ಠ ಅನಿಲ್ ಕಾಂತ್, ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್, ಆಯುಕ್ತ ಎಸ್. ಶ್ರೀಜಿತ್ ಮತ್ತಿತರರು ಮಾತನಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries