HEALTH TIPS

ಕಾಸರಗೋಡು ಮೂಲದ ನಟಿ ಶ್ರೀವಿದ್ಯಾ ಮುಲ್ಲಶ್ಶೇರಿ ವಿವಾಹ ನಿಶ್ಚಿತಾರ್ಥ; ವರ ನಿರ್ದೇಶಕ ರಾಹುಲ್ ರಾಮಚಂದ್ರನ್


             ಕಾಸರಗೋಡು: ಕಾಸರಗೋಡು ಪೆರುಂಬಳ ಮೂಲದ ನಟಿ ಶ್ರೀವಿದ್ಯಾ ಮುಲ್ಲಶ್ಶೇರಿ ವಿವಾಹಿತಗಲಿದ್ದಾರೆ. ವರ ನಿರ್ದೇಶಕ ರಾಹುಲ್ ರಾಮಚಂದ್ರನ್. ಮೊಗ್ರಾಲ್ ನ ರೆಸಾರ್ಟ್‍ನಲ್ಲಿ ಮೊನ್ನೆ ರಾತ್ರಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರ ಆಪ್ತರು ಮತ್ತು ಕೆಲವು ಸ್ನೇಹಿತರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ, ಶ್ರೀವಿದ್ಯಾ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಪ್ರೀತಿ ಮತ್ತು ನಿಶ್ಚಿತಾರ್ಥದ ವಿವರಗಳನ್ನು ಹಂಚಿಕೊಂಡಿದ್ದರು.  ಆರು ವರ್ಷಗಳ ಪ್ರೇಮಕಥೆಯನ್ನು ಶ್ರೀವಿದ್ಯಾ ಹಂಚಿಕೊಂಡಿದ್ದರು.
            ಫ್ಲವರ್ಸ್ ವಾಹಿನಿಯ ಸ್ಟಾರ್ ಮ್ಯಾಜಿಕ್ ಕಾರ್ಯಕ್ರಮದ ಮೂಲಕ ಮಲಯಾಳಿಗಳಿಗೆ ಚಿರಪರಿಚಿತರಾದ ತಾರೆ ಶ್ರೀವಿದ್ಯಾ.  2019 ರಲ್ಲಿ ಬಿಡುಗಡೆಯಾದ ಜೀಂಬೂಬಾ ರಾಹುಲ್ ಅವರ ಮೊದಲ ಚಿತ್ರ. ರಾಹುಲ್ ನಿರ್ದೇಶನದ ಹೊಸ ಚಿತ್ರ ಸುರೇಶ್ ಗೋಪಿ ಅಭಿನಯದ 251. ಶ್ರೀವಿದ್ಯಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಧ್ಯಾನ್ ಶ್ರೀನಿವಾಸನ್ ಅಭಿನಯದ 'ಸತ್ಯಂ ಎನ್ನ ಬೋಧಿಪಿಕ್ಕು' ಶ್ರೀವಿದ್ಯಾ ಅವರ ಹೊಸ ಚಿತ್ರ. ನಟ ಸುರೇಶ್ ಗೋಪಿ ಮತ್ತಿತರರು ವಿಡಿಯೋ ಕಾಲ್ ಮೂಲಕ ಇಬ್ಬರಿಗೂ ವಿಶ್ ಮಾಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳು ನವ ಮಾಧ್ಯಮಗಳಲ್ಲಿ ವೈರಲ್ ಆಗಿವೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries