HEALTH TIPS

ಸರ್ಕಾರಿ ಕಾಲೇಜಿನ ಪದವೀಧರರ ಸುವರ್ಣ ಮಹೋತ್ಸವ ಸಂಗಮ

           ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನ 1970 - 73ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯ 50 ವರ್ಷಗಳ 'ಸುವರ್ಣ ಮಹೋತ್ಸವ ಸಂಗಮ' ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾಲೇಜಿನಲ್ಲಿ 50ವರ್ಷಗಳ ಹಿಂದೆ ವಿದ್ಯಾಬ್ಯಾಸ ನಡೆಸಿದವರು ಮತ್ತೆ ಅದೇ ಕಾಲೇಜಿನಲ್ಲಿ ಒಟ್ಟು ಸೇರುವ ಮೂಲಕ ಪದವಿ ಶಿಕ್ಷಣ ಪಡೆದ 50ರ ಸಂಭ್ರಮ ಆಚರಿಸಿಕೊಂಡರು. ತಾವು ಓದಿದ ಕಾಲೇಜಿಗೆ ಬಂದು ಹಳೆಯ ಕಾಲವನ್ನು ನೆನೆದು ಪ್ರತಿಯೊಬ್ಬರು 50 ವರ್ಷಗಳ ಅನುಭವ ಹಂಚಿಕೊಂಡರು.
             ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 70 ಮಂದಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲೆ ಡಾ. ರಮಾ ಕಾರ್ಯಕ್ರಮ ಉದ್ಘಾಟಿಸಿದರು.
              ಬಳಗದ ಅಧ್ಯಕ್ಷ ಸಿ.ಸಿ.ರಘುನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇಣುಗೋಪಾಲಿ, ನಾರಾಯಣ ಕಾಮತ್, ಪ್ರಸನ್ನ, ರಮಣಿ, ಕುಮಾರನ್, ಶ್ಯಾಮಲಾ ಮೋಹನ ಮುಂತಾದವರು ಉಪಸ್ಥಿತರಿದ್ದರು.
             ಸ್ಮಿತಾ ಮತ್ತು ಇತರರು ಹಾಡುಗಳನ್ನು ಹಾಡಿದರು. ಬ್ಯಾಚಿನಲ್ಲಿದ್ದವರೆಲ್ಲರೂ 70ವರ್ಷ ದಾಟಿದ್ದರೂ, ತುಬು ಉತ್ಸಾಹ, ಲವಲವಿಕೆಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
             ಈ ಚಟುವಟಿಕೆಗಳಿಗಾಗಿ 2019 ರಲ್ಲಿ ರಚಿಸಲಾದ ವಾಟ್ಸಪ್ ಗುಂಪು ಸಹಾಯಕವಾಗಿದೆ. ಎಲ್ಲರ ಭಾಗವಹಿಸುವಿಕೆ ಮತ್ತು ಪರಸ್ಪರ ಸಹಕಾರದೊಂದಿಗೆ ಸಂಗಮ ಅತ್ಯಂತ ಯಶಸ್ವಿ ಮತ್ತು ಉತ್ತೇಜನಕಾರಿಯಾಗಿ ನಡೆಯಿತು. ಎ.ಕರುಣಾಕರನ್ ನಾಯರ್ ಸಂತಾಪ ಸೂಚಕ ನಿರ್ಣಯವನ್ನೂ ಮಂಡಿಸಿದರು. ಕೆ. ಮೋಹನನ್.ನಾಯರ್ ಸ್ವಾಗತಿಸಿದರು. ಕೆ.ಕೆ.ವಿಜಯನ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries