HEALTH TIPS

ಕೊಳಚಪ್ಪು ಹಾಗೂ ಇಚ್ಲಂಗೋಡು ದೇವಾಲಯಗಳ ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ


     ಮಂಜೇಶ್ವರ: ಮಲಬಾರ್ ದೇವಸ್ವಂ ಬೋರ್ಡ್ ಅಧೀನದ ಮೀಂಜ ಕೊಳಚಪ್ಪು ಶ್ರೀ ಶಾಸ್ತಾ ದೇವಸ್ಥಾನದಲ್ಲಿ ಖಾಲಿ ಇರುವ ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸಮೀಪ ವಾಸಿಸುವ ಹಿಂದೂ ಮತ ಅನುಯಾಯಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗ ನೀಲೇಶ್ವರದಲ್ಲಿರುವ ಸಹಾಯಕ ಆಯುಕ್ತರರ ಕಛೇರಿಗೆ ಫೆಬ್ರವರಿ 20 ಸೋಮವಾರ ಸಂಜೆ 5 ಗಂಟೆಯ ಮೊದಲು ತಲಪುವಂತೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಮಲಬಾರ್ ದೇವಸ್ವಂ ಬೋರ್ಡ್ ವೆಬ್‍ಸೈಟ್ ನಿಂದ ಅಥವಾ ನೀಲೇಶ್ವರದಲ್ಲಿರುವ ಆಯುಕ್ತರರ ಕಛೇರಿಯಿಂದ ಕರ್ತವ್ಯದ ದಿನಗಳಲ್ಲಿ ಉಚಿತವಾಗಿ ಪಡೆಯಬಹುದು. ನಿಗದಿತ ದಿನಾಂಕದ ನಂತರ ಲಭಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಆಯುಕ್ತರರು ತಿಳಿಸಿದ್ದಾರೆ.

       ಉಪ್ಪಳ: ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿ ಬಂದ್ಯೋಡು ಸಮೀಪದ ಇಚ್ಲಂಗೋಡು ಕೊಮಾರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಖಾಲಿ ಇರುವ ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ವ್ಯಾಪ್ತಿಯಲ್ಲಿರುವ  ಹಿಂದೂ ಮತ ಅನುಯಾಯಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗ ನೀಲೇಶ್ವರದಲ್ಲಿರುವ ಸಹಾಯಕ ಆಯುಕ್ತರರ ಕಛೇರಿಗೆ ಫೆಬ್ರವರಿ 20 ಸೋಮವಾರ ಸಂಜೆ 5 ಗಂಟೆಯ ಮೊದಲು ನೀಡಬೇಕು.  ಅರ್ಜಿ ನಮೂನೆಯನ್ನು ಮಲಬಾರ್ ದೇವಸ್ವಂ ಬೋರ್ಡ್ ವೆಬ್‍ಸೈಟ್ ನಿಂದ ಅಥವಾ ನೀಲೇಶ್ವರದಲ್ಲಿರುವ ಆಯುಕ್ತರರ ಕಛೇರಿಯಿಂದ ಕರ್ತವ್ಯದ ದಿನಗಳಲ್ಲಿ ಉಚಿತವಾಗಿ ಪಡೆಯಬಹುದು. ನಿಗದಿತ ದಿನಾಂಕದ ನಂತರ ಲಭಿಸುವ ಅರ್ಜಿಗಳನ್ನು  ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಆಯುಕ್ತರರು ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries