HEALTH TIPS

ಮತ್ತೆ ಟ್ವಿಟರ್‌ಗೆ ಮರಳಿದ ಕಂಗನಾ ರಣಾವತ್ ಮೊದಲ ಟ್ವೀಟ್ ನಲ್ಲಿ ಹೇಳಿದ್ದೇನು?

 

               ಮುಂಬೈ: ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣ ಟ್ವಿಟರ್‌ಗೆ ಮರಳಿದ್ದಾರೆ. ತನ್ನ ಟ್ವಿಟರ್ ಖಾತೆ ಅಮಾನತುಗೊಂಡ ಬಳಿಕ ʼಕೂʼ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಗೊಂಡಿದ್ದ ಅವರು ತಾನು ಟ್ವಿಟರ್‌ಗೆ ಮರಳಿ ಬಂದಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

                  ಮಂಗಳವಾರ, ಕಂಗನಾ ಅವರ ತಂಡವು ನಿರ್ವಹಿಸುವ ಟ್ವಿಟರ್ ಖಾತೆಯಲ್ಲಿ, "ಎಲ್ಲರಿಗೂ ನಮಸ್ಕಾರ, ಇಲ್ಲಿಗೆ ಹಿಂತಿರುಗಲು ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

                  ಕಂಗನಾ ಟ್ವೀಟ್‌ ಬೆನ್ನಲ್ಲೇ ಹಲವು ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಟ್ವಿಟರ್‌ ಬಳಕೆದಾರರು ಅವರನ್ನು ಸ್ವಾಗತಿಸಿದ್ದಾರೆ.
                  ಸಾಧ್ವಿ ಪ್ರಾಚಿ ಸೇರಿದಂತೆ ಬಲಪಂಥೀಯರು ಕಂಗನಾ ಅವರ ಟ್ವಿಟರ್‌ ಮರಳುವಿಕೆಗೆ ಸ್ವಾಗತ ಕೋರಿದ್ದು, ತಮಿಳು ಖ್ಯಾತ ನಟ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಬೆಂಕಿಯ ಇಮೋಜಿಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

                   ನೀತಿ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಮೇ 2021 ರಲ್ಲಿ, ಕಂಗನಾ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.

                 ನಟಿಯ ಖಾತೆ ಮೂಲಕ ಮಾಡುವ ಟ್ವೀಟ್‌ಗಳು ಆಫ್‌ಲೈನ್‌ ನಲ್ಲೂ ಹಾನಿಗೆ ಕಾರಣವಾಗುವ ಸಾಮರ್ಥ್ಯ ಇದೆ. ಧ್ವೇಷಪೂರಿತ ನಡವಳಿಕೆ ಮತ್ತು ನಿಂದನೀಯ ವರ್ತನೆಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಅಂದಿನ ಟ್ವಿಟರ್‌ ವಕ್ತಾರರು ತಿಳಿಸಿದ್ದರು.

               ಎಲಾನ್‌ ಮಸ್ಕ್‌ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಹಿಂದೆ ಅಮಾನತ್ತಾಗಿದ್ದ ಹಲವು ಟ್ವಿಟರ್‌ ಖಾತೆಗಳನ್ನು ಪುನಃ ಸ್ಥಾಪಿಸಲಾಗಿತ್ತು.

Hello everyone, it’s nice to be back here 🙂
जय श्री राम 🚩
185
Reply
Copy link

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries