HEALTH TIPS

ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ


            ಕಾಸರಗೋಡು: ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ವಿದ್ಯಾನಗರ ನಗರಸಭೆ ಕ್ರೀಡಾಂಗಣದಲ್ಲಿ ಬೆಳಗ್ಗೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪೆÇಲೀಸ್ ಅಬಕಾರಿ ಇಲಾಖೆಗಳ ತುಕಡಿಗಳು ಗೌರವ ವಂದನೆ ನಿರ್ವಹಿಸಲಿದೆ. ಆಯ್ದ ಕಾಲೇಜುಗಳು ಮತ್ತು ಶಾಲೆಗಳಿಂದ ಎಸ್‍ಪಿಸಿ, ರೆಡ್‍ಕ್ರಾಸ್, ಎನ್‍ಎಸ್‍ಎಸ್, ಎನ್‍ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಪರೇಡ್‍ಗಳು ಸಹ ನಡೆಯುತ್ತವೆ. ಪ್ರತಿ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಯಿಂದ ತಲಾ 30 ಮಂದಿ ಪರೇಡ್‍ನಲ್ಲಿ ಭಾಗವಹಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಮೂರು ಹಂತಗಳಲ್ಲಿ ಅಭ್ಯಾಸ ಮಾಡಲು ಅವಕಾಶವಿದೆ. ಜನವರಿ 22 ಮತ್ತು 23 ರಂದು ಮಧ್ಯಾಹ್ನ 2 ಮತ್ತು 25 ರಂದು ಬೆಳಿಗ್ಗೆ 7 ಗಂಟೆಗೆ ಪೂರ್ವಾಭ್ಯಾಸಕ್ಕಾಗಿ ವಿದ್ಯಾನಗರ ಕ್ರೀಡಾಂಗಣವನ್ನು ತಲುಪಲಿವೆ. ಪರೇಡ್ ನಲ್ಲಿ ಭಾಗವಹಿಸುವವರು 26ರ ಬೆಳಗ್ಗೆ 7 ಗಂಟೆಗೆ ಕ್ರೀಡಾಂಗಣಕ್ಕೆ ವರದಿ ಮಾಡಿಕೊಳ್ಳಬೇಕು. ಸ್ವಂತ ವಾಹನ ಇಲ್ಲದ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ ಜಿಲ್ಲಾ ಸಾರಿಗೆ ಅಧಿಕಾರಿ ಹಾಗೂ ಆರ್‍ಟಿಒ ಅವರನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ಕ್ರೀಡಾಂಗಣದಲ್ಲಿ ಭದ್ರತೆ ಒದಗಿಸಲಾಗುವುದು. ಗಣರಾಜ್ಯದ ಅಂಗವಾಗಿ ಜನವರಿ 25 ಮತ್ತು 26 ರಂದು ಕಾಸರಗೋಡು ತಹಸೀಲ್ದಾರ್ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೆಚ್ಚುವರಿ ತಹಸೀಲ್ದಾರ್ ಸ್ಥಾನಗಳನ್ನು ಒದಗಿಸಲಾಗುವುದು. ಕೇರಳ ಜಲ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕ್ರೀಡಾಂಗಣದಲ್ಲಿ ಸಾಕಷ್ಟು ಕುಡಿಯುವ ನೀರಿನ ಸೌಲಭ್ಯವನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ನಿರ್ದೇಶನದ ಮೇರೆಗೆ ವೈದ್ಯಕೀಯ ನೆರವು ಮತ್ತು ತುರ್ತು ವೈದ್ಯಕೀಯ ನೆರವು ನೀಡಲಾಗುವುದು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನೇತೃತ್ವದಲ್ಲಿ ಅಗ್ನಿಶಾಮಕ ದಳ ಇರುತ್ತದೆ. ಜಿಲ್ಲೆಯಲ್ಲಿ ಕೊನೆಯದಾಗಿ ಗಣರಾಜ್ಯೋತ್ಸವವನ್ನು 2018 ರಲ್ಲಿ ಆಯೋಜಿಸಲಾಗಿತ್ತು. ಕಳೆದ ವರ್ಷ ಕೋವಿಡ್ ಮಾನದಂಡವನ್ನು ಆಧರಿಸಿ ಆಚರಣೆ ಮಾಡಲಾಗಿತ್ತು.
         ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಪ್ರಭಾರ ಎಡಿಎಂ ಎ.ಕೆ.ರಾಮೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಆರ್.ಡಿ.ಒ ಅತುಲ್ ಎಸ್.ನಾಥ್, ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶನ ನಾಯರ್, ಅಪರಾಧ ವಿಭಾಗದ ಡಿವೈಎಸ್ಪಿ ಎ.ಸತೀಶ್ ಕುಮಾರ್ ಮತ್ತಿತರರು ಮಾತನಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲಾ ಕಾಲೇಜು ಪ್ರತಿನಿಧಿಗಳು ಮೊದಲಾದವರು ಭಾಗವಹಿಸಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries