HEALTH TIPS

ಎಐಸಿಟಿಇ ಪಠ್ಯಗಳು ಈಗಮುಕ್ತ ಬಳಕೆಗೆ ಲಭ್ಯ

 

           ನವದೆಹಲಿ : ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಪಠ್ಯಕ್ರಮಗಳು ಈಗ ವಿದೇಶಗಳಲ್ಲೂ ಲಭ್ಯವಾಗಲಿದೆ. ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಠ್ಯಕ್ರಮ ಲಭ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮ ಕೈಗೊಂಡಿದೆ.

                  ಪಠ್ಯಕ್ರಮದ ಉಚಿತ ವಿತರಣೆಗೆ ಅನುವಾಗುವಂತೆ ಸಾರ್ವಜನಿಕ ಹಕ್ಕುಸ್ವಾಮ್ಯವಾದ ಕ್ರಿಯೇಟಿವ್‌ ಕಾಮನ್ಸ್ ಲೈಸೆನ್ಸ್ ಅನ್ನು ಎಐಸಿಟಿಇ ಪಡೆದುಕೊಂಡಿದೆ. ಈ ಲೈಸೆನ್ಸ್ ಲೇಖಕನಿಗೆ ತನ್ನ ಕೃತಿಗಳನ್ನು ಮುಕ್ತವಾಗಿ ಬಳಸುವ, ಹಂಚಿಕೆ ಮಾಡುವ, ಅದನ್ನು ಆಧರಿಸಿ ಅಧ್ಯಯನ ಮಾಡುವ ಹಕ್ಕುಗಳನ್ನು ಅನ್ಯರಿಗೆ ನೀಡಲು ಅವಕಾಶ ಕಲ್ಪಿಸಲಿದೆ.

              2019ರ ನವೆಂಬರ್ 25ರಂದು ಯುನೆಸ್ಕೊ ಅಂಗೀಕರಿಸಿದ್ದ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಒಇಆರ್) ನಿರ್ಣಯಕ್ಕೆ ಅನುಗುಣವಾಗಿ ಮಂಡಳಿಯು ಈ ಲೈಸೆನ್ಸ್ ಅನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಟಿ.ಜಿ.ಸೀತಾರಾಂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

             ಪ್ರಸ್ತುತ ಸದ್ಯ ಇ-ಕುಂಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿರುವ ಎರಡನೇ ವರ್ಷದ ಕೋರ್ಸ್‌ನ ಇಂಗ್ಲಿಷ್‌ ಮತ್ತು ಇತರೆ ಭಾರತೀಯ ಭಾಷೆಗಳ ಪಠ್ಯಕ್ರಮಗಳಿಗೆ ಅನ್ವಯಿಸಿ ಈ ಲೈಸೆನ್ಸ್ ಅನ್ವಯವಾಗಲಿದೆ. ಭವಿಷ್ಯದಲಿ ಇತರೆ ಪುಸ್ತಕಗಳು ಹಾಗೂ ಮೂರು, ನಾಲ್ಕನೇ ವರ್ಷದ ಪಠ್ಯಗಳಿಗೂ ಅನ್ವಯಿಸಲಾಗುವುದು ಎಂದು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries