HEALTH TIPS

CCI ವಿಧಿಸಿರುವ ರೂ. 1337.76 ಕೋಟಿ ದಂಡದ ಪೈಕಿ ಶೇ. 10ರಷ್ಟು ದಂಡ ಪಾವತಿಸುವಂತೆ ಗೂಗಲ್ ಗೆ ನಿರ್ದೇಶಿಸಿದ NCLAT

                   ವದೆಹಲಿ: ಸ್ಪರ್ಧಾತ್ಮಕ ವಿರೋಧಿ ನಡವಳಿಕೆಗಾಗಿ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ಗೆ (Google) ಭಾರತೀಯ ಸ್ಪರ್ಧಾ ಆಯೋಗ ಆಯೋಗ ವಿಧಿಸಿದ್ದ ರೂ. 1337.76 ಕೋಟಿ ದಂಡದ ಪೈಕಿ ಶೇ. 10ರಷ್ಟು ದಂಡವನ್ನು ಪಾವತಿಸುವಂತೆ ಗೂಗಲ್ ಸಂಸ್ಥೆಗೆ ರಾಷ್ಟ್ರೀಯ ಉದ್ಯಮ ಕಾನೂನು ಮೇಲ್ಮನವಿ ನ್ಯಾಯಾಧಿಕರಣ ಬುಧವಾರ ನಿರ್ದೇಶನ ನೀಡಿದೆ.

                  ಹೀಗಿದ್ದೂ, ಭಾರತೀಯ ಸ್ಪರ್ಧಾ ಆಯೋಗ ವಿಧಿಸಿರುವ ದಂಡಕ್ಕೆ ತಕ್ಷಣವೇ ತಡೆ ನೀಡಲು ನಿರಾಕರಿಸಿರುವ ದ್ವಿಸದಸ್ಯ ಪೀಠವು, ಪ್ರತಿವಾದಿಗಳ ವಾದವನ್ನು ಆಲಿಸಿದ ನಂತರವೇ ಆದೇಶ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

                 ಮಧ್ಯಂತರ ತಡೆಗಾಗಿ ಕೋರಿರುವ ಅರ್ಜಿಯ ಮರು ವಿಚಾರಣೆಯನ್ನು ಫೆಬ್ರವರಿ 13ಕ್ಕೆ ನಿಗದಿಗೊಳಿಸಿರುವ ಮೇಲ್ಮನವಿ ನ್ಯಾಯಾಧಿಕರಣವು, ಭಾರತೀಯ ಸ್ಪರ್ಧಾ ಆಯೋಗಕ್ಕೆ (Competition Commission of India (CCI)) ನೋಟಿಸ್ ಜಾರಿ ಮಾಡಿದೆ.

                  ಆಯಂಡ್ರಾಯ್ಡ್ ಮೊಬೈಲ್ ಸಾಧನಗಳ ತಯಾರಿಕಾ ವಲಯದಲ್ಲಿ ಹಲವಾರು ಮಾರುಕಟ್ಟೆಗಳ ಮೇಲೆ ಗೂಗಲ್ ಹಿಡಿತ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿದ್ದ ಭಾರತೀಯ ಸ್ಪರ್ಧಾ ಆಯೋಗ, ದಂಡ ವಿಧಿಸುವ ಆದೇಶವನ್ನು ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಗೂಗಲ್ ಸಂಸ್ಥೆ, ಈ ಆದೇಶದಿಂದ ಭಾರತೀಯ ಬಳಕೆದಾರರಿಗೆ ಹಿನ್ನಡೆಯಾಗಲಿದ್ದು, ದೇಶದಲ್ಲಿ ಮೊಬೈಲ್ ಸಾಧನಗಳು ಮತ್ತಷ್ಟು ದುಬಾರಿಯಾಗಲಿವೆ ಎಂದು ವಾದಿಸಿದೆ.

                  ಇದಕ್ಕೂ ಮುನ್ನ ಕಳೆದ ವರ್ಷದ ಅಕ್ಟೋಬರ್ 20ರಂದು ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆಯು ಸ್ಪರ್ಧಾತ್ಮಕ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ನಿರ್ಣಯಿಸಿದ್ದ CCI, ಗೂಗಲ್ ಸಂಸ್ಥೆಗೆ ರೂ. 1337.76 ಕೋಟಿ ದಂಡ ವಿಧಿಸಿತ್ತು. ಅಲ್ಲದೆ, ಹಲವಾರು ನ್ಯಾಯಬಾಹಿರ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು ಮತ್ತು ಅವುಗಳಿಂದ ದೂರ ಉಳಿಯಬೇಕು ಎಂದು ಈ ಪ್ರಮುಖ ಅಂತರ್ಜಾಲ ಸಂಸ್ಥೆಗೆ ಭಾರತೀಯ ಸ್ಪರ್ಧಾ ಆಯೋಗ ಆದೇಶಿಸಿತ್ತು.

              ಈ ಆದೇಶವನ್ನು ಪ್ರಶ್ನಿಸಿ ಗೂಗಲ್ ಸಂಸ್ಥೆಯು, ರಾಷ್ಟ್ರೀಯ ಉದ್ಯಮ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಎದುರು ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ಗೂಗಲ್ ಸಂಸ್ಥೆ ಮನವಿ ಮಾಡಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries