ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 53 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ 26 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ರೋಗ ಬಾಧಿತರಲ್ಲಿ 7 ಮಂದಿ ಇತರ ರಾಜ್ಯಗಳಿಂದ ಮತ್ತು ಐವರು ವಿದೇಶದಿಂದ ಬಂದವರು.
ಚೆಮ್ನಾಡ್-18, ಪನತ್ತಡಿ-2, ಮಂಜೇಶ್ವರ-2, ಮಂಗಲ್ಪಾಡಿ-2, ಚೆರ್ವತ್ತೂರು-2, ಕಾಸರಗೋಡು ನಗರಸಭೆ-3, ಪಳ್ಳಿಕೆರೆ-1, ಚೆಂಗಳ-2, ಪುಲ್ಲೂರು ಪೆರಿಯ-2, ಕಳ್ಳಾರು-4 ಎಂಬಂತೆ ರೋಗ ಬಾಧಿಸಿದೆ.
ಜು.26 ಆಸ್ಪತ್ರೆಯಲ್ಲಿ ಸಾವಿಗೀಡಾದ 62 ವರ್ಷದ ವ್ಯಕ್ತಿಯ ಗಂಟಲ ದ್ರವ ಪರಿಶೋಧನೆಯಲ್ಲಿ ಪಾಸಿಟಿವ್ ಆಗಿದ್ದು, ಇದರೊಂದಿಗೆ ಕಾಸರಗೋಡಿನಲ್ಲಿ ಕೊರೊನಾ ವೈರಸ್‍ನಿಂದ ಸಾವಿಗೀಡಾದವರ ಸಂಖ್ಯೆ ಆರಕ್ಕೇರಿತು.
ಲಾಕ್‍ಡೌನ್ ಉಲ್ಲಂಘನೆ : 3225 ಮಂದಿ ವಿರುದ್ಧ ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 3225 ಕೇಸುಗಳನ್ನು ದಾಖಲಿಸಲಾಗಿದೆ. 4311 ಮಂದಿಯನ್ನು ಬಂಧಿಸಲಾಗಿದ್ದು, 1291 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 14744 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 14744 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.


