ನವದೆಹಲಿ: ಅಗ್ನಿವೀರರ ಕರ್ತವ್ಯ ಅವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬುಧವಾರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸುಮಾರು 18,000 ಅಗ್ನಿವೀರರು ಸಶಸ್ತ್ರ ಪಡೆಗಳಿಂದ ಹೊರಬರಲು ಕೆಲವೇ ವಾರಗಳು ಬಾಕಿ ಇರುವಂತೆಯೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.
ಕಾರ್ಯಕ್ಷಮತೆ ಮತ್ತು ಅದರ ಪರಿಶೀಲನೆಯ ಆಧಾರದ ಮೇಲೆ ಎಲ್ಲಾ ಅಗ್ನಿವೀರರಿಗೂ ಸಶಸ್ತ್ರ ಪಡೆಗಳಲ್ಲಿ ಸೇವೆ ಮುಂದುವರಿಸಲು ಅವಕಾಶ ನೀಡಲಾಗುವುದು' ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ತಿಳಿಸಿದ್ದಾರೆ.
'ಅಗ್ನಿಪಥ್' ಯೋಜನೆಯಡಿ 4 ವರ್ಷಗಳ ಅವಧಿಗೆ ನೇಮಕಗೊಳ್ಳುವ ಸೈನಿಕರ ಪೈಕಿ ಕೇವಲ ಶೇ 25ರಷ್ಟು ಜನರನ್ನು ಮಾತ್ರ ನಿಯಮಿತ ಸೇವೆಗೆ (ಖಾಯಂ) ಉಳಿಸಿಕೊಳ್ಳುವ ನಿಯಮವಿತ್ತು.



