HEALTH TIPS

ಅಮೆರಿಕದ ರಾಜಕೀಯದಲ್ಲಿ ಬದಲಾವಣೆಯ ಗಾಳಿ; ಹಲವು ಐತಿಹಾಸಿಕ ಗೆಲುವುಗಳು

ವಾಷಿಂಗ್ಟನ್‌: ಅಮೆರಿಕದಲ್ಲಿ ನಡೆಯುತ್ತಿರುವ ಮಧ್ಯಂತರ ಚುನಾವಣೆಯು ಹಲವು ಪ್ರಮುಖ ಐತಿಹಾಸಿಕ ಸಾಧನೆಗಳಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕನ್‌ ಸೆನೆಟ್‌ಗೆ 'ಗೇ' ಎಂದು ಬಹಿರಂಗವಾಗಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ. ಅಮೆರಿಕದ ಮೂಲನಿವಾಸಿ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಗವರ್ನರ್‌ ಆಗಿ ಆಯ್ಕೆಯಾಗಿದ್ದಾರೆ.


ನ.3ರಂದು ನಡೆದ ಮಧ್ಯಂತರ ಚುನಾವಣೆಯ ಫಲಿತಾಂಶವು ಇಂತಹ ಹಲವು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.

ಮಧ್ಯಂತರ ಚುನಾವಣೆಯಲ್ಲಿ ದಾಖಲಾದ ಐತಿಹಾಸಿಕ ಸಾಧನೆಗಳು:

1. ಡೆಬ್ ಹಾಲ್ಯಾಂಡ್: ಗವರ್ನರ್ ಆಗಿ ಆಯ್ಕೆಯಾದ ಮೊದಲ ಅಮೆರಿಕನ್ ಮೂಲನಿವಾಸಿ ಮಹಿಳೆ ಎನ್ನುವ ಖ್ಯಾತಿಗೆ ಡೆಮಾಕ್ರಟ್ ಪಕ್ಷದ ಡೆಬ್ ಹಾಲ್ಯಾಂಡ್ ಪಾತ್ರರಾಗಿದ್ದಾರೆ. ನ್ಯೂ ಮೆಕ್ಸಿಕೊದ ಗವರ್ನರ್ ಚುನಾವಣೆಯಲ್ಲಿ ಗೆದ್ದು, ಅವರು ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಲಗುನಾ ಪ್ಯೂಬ್ಲೊ ಬುಡಕಟ್ಟಿನವರಾದ ಹಾಲ್ಯಾಂಡ್, ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಮೂಲಕ ಫೆಡರಲ್ ಇಲಾಖೆಯನ್ನು ಮುನ್ನಡೆಸಿದ ಮೊದಲ ಅಮೆರಿಕನ್ ಮೂಲನಿವಾಸಿ ಎನಿಸಿಕೊಂಡಿದ್ದರು. ಅವರು 2018ರಲ್ಲಿ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಇಬ್ಬರು ಅಮೆರಿಕನ್ ಮೂಲನಿವಾಸಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

2. ಕೀಶಾ ಲ್ಯಾನ್ಸ್ ಬಾಟಮ್ಸ್: ಕೀಶಾ ಅವರು ಗವರ್ನರ್ ಆಗಿ ಆಯ್ಕೆಯಾದ ಮೊದಲ ಕಪ್ಪು ಜನಾಂಗದ ಮಹಿಳೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಟ್ಲಾಂಟಾದ ಮಾಜಿ ಮೇಯರ್ ಆಗಿರುವ ಇವರು, ಜಾರ್ಜಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಅಲ್ಲಿನ ಮೊದಲ ಮಹಿಳಾ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. 2018 ರಿಂದ 2022ರವರೆಗೆ ಬಾಟಮ್ಸ್ ಅವರು ಅಟ್ಲಾಂಟಾದ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಬೈಡನ್ ಆಡಳಿತದಲ್ಲಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ.

3. ಕ್ರಿಸ್ ಪಾಪಾಸ್: ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ, ಬಹಿರಂಗವಾಗಿ 'ಗೇ' ಎಂದು ಗುರುತಿಸಿಕೊಂಡಿರುವ ಮೊದಲ ವ್ಯಕ್ತಿಯಾಗಿದ್ದಾರೆ. ಡೆಮಾಕ್ರಟ್ ಪಕ್ಷದ ಕ್ರಿಸ್ ಪಾಪಾಸ್ ಅವರು ನ್ಯೂ ಹ್ಯಾಂಪ್‌ಶೈರ್‌ನ ಸೆನೆಟ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು 2019ರಿಂದ ನ್ಯೂ ಹ್ಯಾಂಪ್‌ಶೈರ್‌ನ 1ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ. 2012ರಲ್ಲಿ ಟ್ಯಾಮಿ ಬಾಲ್ಡ್‌ವಿನ್ ಅವರು ಮೊದಲ ಲೆಸ್ಬಿಯನ್ ಮಹಿಳೆಯಾಗಿ ಆಯ್ಕೆಯಾಗಿದ್ದರು. ಅದರ ನಂತರ, ಸೆನೆಟ್‌ನಲ್ಲಿ ಎಲ್‌ಜಿಬಿಟಿಕ್ಯೂ+ ಪ್ರಾತಿನಿಧ್ಯಕ್ಕೆ ಕ್ರಿಸ್ ಪಾಪಾಸ್ ಆಯ್ಕೆಯು ದೊಡ್ಡ ಮೈಲಿಗಲ್ಲಾಗಿದೆ.

4. ಮೆಲಾಟ್ ಕಿರೋಸ್: ಮೆಲಾಟ್ ಅವರು ಕಾಂಗ್ರೆಸ್‌ಗೆ ಆಯ್ಕೆಯಾದ ಕೊಲೊರಾಡೋದ ಮೊದಲ ಕಪ್ಪು ಜನಾಂಗದ ಮಹಿಳೆಯಾಗಿದ್ದಾರೆ. ಡೆಮಾಕ್ರಟ್ ಪಕ್ಷದ ಮೆಲಾಟ್ ಅವರು ಕೊಲೊರಾಡೋದ 1ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ವಕೀಲೆ ಮತ್ತು ಡಾಕ್ಟರೇಟ್ ವಿದ್ಯಾರ್ಥಿನಿಯಾಗಿರುವ ಕಿರೋಸ್, ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಹಿರಿಯ ಜನಪ್ರತಿನಿಧಿ ಡಯಾನಾ ಡೆಗೆಟ್ ಅವರನ್ನು ಸೋಲಿಸಿ ಡೆಮಾಕ್ರಟಿಕ್ ನಾಮನಿರ್ದೇಶನವನ್ನು ಗಿಟ್ಟಿಸಿಕೊಂಡಿದ್ದರು.

5. ಬೈರಾನ್ ಡೊನಾಲ್ಡ್ಸ್: ಫ್ಲೋರಿಡಾದ ಮೊದಲ ಕಪ್ಪು ಜನಾಂಗದ ಗವರ್ನರ್ ಎನ್ನುವ ಸಾಧನೆಗೆ ಬೈರಾನ್ ಡೊನಾಲ್ಡ್ಸ್ ಪಾತ್ರರಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಬೈರಾನ್ ಡೊನಾಲ್ಡ್ಸ್ ಅವರು ಫ್ಲೋರಿಡಾದ ಗವರ್ನರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಗವರ್ನರ್ ಆಗಿ ಆಯ್ಕೆಯಾದ ಮೊದಲ ಕಪ್ಪು ಜನಾಂಗದ ರಿಪಬ್ಲಿಕನ್ ನಾಯಕರನ್ನಾಗಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರಾಗಿರುವ ಡೊನಾಲ್ಡ್ಸ್, ತಮ್ಮ ಪ್ರಚಾರದ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲವನ್ನು ಪಡೆದಿದ್ದರು.

6. ಕ್ಲೇರ್ ವಾಲ್ಡೆಜ್: ಕಾಂಗ್ರೆಸ್‌ಗೆ ಆಯ್ಕೆಯಾದ ನ್ಯೂಯಾರ್ಕ್‌ನ ಮೊದಲ ಅಮೆರಿಕನ್ ಮೂಲನಿವಾಸಿ ಮಹಿಳೆ ಎನ್ನುವ ಖ್ಯಾತಿಗೆ ಕ್ಲೇರ್ ವಾಲ್ಡೆಜ್ ಪಾತ್ರರಾಗಿದ್ದಾರೆ. ಡೆಮಾಕ್ರಟ್ ಪಕ್ಷದ ಕ್ಲೇರ್ ವಾಲ್ಡೆಜ್ ನ್ಯೂಯಾರ್ಕ್‌ನ 7ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಈ ಹಿಂದೆ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

7. ಆಯಡಂ ಹಮಾವಿ: ನ್ಯೂಜೆರ್ಸಿಯ ಮೊದಲ ಮುಸ್ಲಿಂ ಕಾಂಗ್ರೆಸ್ ಸದಸ್ಯರಾಗಿ ಆಯಡಂ ಹಮಾವಿ ಆಯ್ಕೆಯಾಗಿದ್ದಾರೆ. ಅಮೆರಿಕ ಸೇನೆಯ ಮಾಜಿ ಸರ್ಜನ್ ಆಗಿರುವ ಡೆಮಾಕ್ರಟ್ ಪಕ್ಷದ ಆಯಡಂ ಹಮಾವಿ, ನ್ಯೂಜೆರ್ಸಿಯ 12ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಲ್ಲಿ ಗೆದ್ದಿದ್ದಾರೆ. ಹಮಾವಿ ಅವರು ಗಾಜಾದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು ಮತ್ತು ವಿದೇಶಗಳಲ್ಲಿನ ವೈದ್ಯಕೀಯ ನಿಯೋಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

8. ಪೆಗ್ಗಿ ಫ್ಲಾನಗನ್: ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಅಮೆರಿಕನ್ ಮೂಲವಾಸಿ ಮಹಿಳೆಯಾಗಿದ್ದಾರೆ. 2019ರಿಂದ ಮಿನ್ನೆಸೋಟಾದ ಲೆಫ್ಟಿನೆಂಟ್ ಗವರ್ನರ್ ಆಗಿರುವ ಪೆಗ್ಗಿ ಫ್ಲಾನಗನ್, ವೈಟ್ ಅರ್ಥ್ ಬ್ಯಾಂಡ್ ಆಫ್ ಓಜಿಬ್ವೆಯ ಪೌರರಾಗಿದ್ದಾರೆ.

9. ಆಮಿ ಆಕ್ಟನ್: ಗವರ್ನರ್ ಆಗಿ ಆಯ್ಕೆಯಾದ ಒಹಾಯೋದ ಮೊದಲ ಮಹಿಳೆಯಾಗಿರುವ ಡೆಮಾಕ್ರಟ್ ಪಕ್ಷದ ಆಮಿ ಆಕ್ಟನ್, ಈ ಹಿಂದೆ ವೈದ್ಯೆಯಾಗಿದ್ದರು. ಒಹಾಯೋ ಆರೋಗ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅವರು, ಕೋವಿಡ್-19 ಸಮಯದಲ್ಲಿನ ಕೆಲಸದಿಂದ ವ್ಯಾಪಕವಾಗಿ ಪ್ರಸಿದ್ಧರಾಗಿದ್ದರು. ಅವರ ಈ ಗೆಲುವು 20 ವರ್ಷಗಳಲ್ಲಿ ಒಹಾಯೋದ ಗವರ್ನರ್ ಆಗಿ ಆಯ್ಕೆಯಾದ ಮೊದಲ ಡೆಮಾಕ್ರಟ್ ನಾಯಕಿಯನ್ನಾಗಿ ಮಾಡಿದೆ.

10. ಅಬ್ದುಲ್ ಅಲ್-ಸಯೀದ್: ಅಮೆರಿಕನ್ ನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಅಮೆರಿಕನ್ ಎನ್ನುವ ಖ್ಯಾತಿಗೆ ಡೆಮಾಕ್ರಟ್ ಪಕ್ಷದ ಅಬ್ದುಲ್ ಪಾತ್ರರಾಗಿದ್ದಾರೆ. ಮಿಷಿಗನ್‌ನ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದಾರೆ. ವೈದ್ಯ ಮತ್ತು ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿರುವ ಇವರು ಈ ಹಿಂದೆ ಡೆಟ್ರಾಯಿಟ್‌ನ ಆರೋಗ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಈಜಿಪ್ಟಿಯನ್ ವಲಸೆ ಪೋಷಕರಿಗೆ ಮಿಚಿಗನ್‌ನಲ್ಲಿ ಹುಟ್ಟಿ ಬೆಳೆದ ಇವರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರೋಡ್ಸ್ ಸ್ಕಾಲರ್ ಆಗಿ ಡಾಕ್ಟರೇಟ್ ಪಡೆದಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries