ಕಾಸರಗೋಡು: ರಾಜ್ಯ ಬಾಲಸಾಹಿತ್ಯ ಇನ್ಸ್ ಸ್ಟಿಟ್ಯೂಟ್ ವತಿಯಿಂದ ಜಿಲ್ಲೆಯ ಮಕ್ಕಳಿಗಾಗಿ ತ್ರಿದಿನ ಚಿತ್ರರಚನೆ ಕಾರ್ಯಾಗಾರ ಗುರುವಾರ ಆರಂಭಗೊಂಡಿದೆ.
ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಈ ಕಾರ್ಯಾಗಾರ ನಡೆಯುತ್ತಿದ್ದು, 40 ಮಕ್ಕಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಕಾಲೇಜಿನ ಎಂಡಮಾಲಜಿ ವಿಭಾಗ ಮುಖ್ಯಸ್ಥ ಪ್ರೊ.ಕೆ.ಎಂ.ಶ್ರೀಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಇನ್ಸ್ ಸ್ಟಿಟ್ಯೂಟ್ ನಿರ್ದೇಶಕ ಪಳ್ಳಿಯರ ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರ ನಿರ್ದೇಶಕ ಕಾರಯ್ಕಾ ಮಂಟಪಂ ವಿಜಯಕುಮಾರ್ ಅವಲೋಕನ ನಡೆಸಿದರು. ಕೃಷಿ ಕಾಲೇಜು ವಿಜ್ಞಾನ ವಿಭಾಗ ಮುಖ್ಯಸ್ಥ ಕೆ.ಜಿ.ಸಂಗೀತಾ, ಪಯ್ಯನ್ನೂರು ಕುಂ??ರಾಮನ್ ಮೊದಲಾದವರು ಉಪಸ್ಥಿತರಿದ್ದರು. ಇನ್ ಸ್ಟಿಟ್ಯೂಟ್ ಸದಸ್ಯ ವಾಸು ಚೇರೋಡ್ ಸ್ವಾಗತಿಸಿದರು. ಎಡಿಟೋರಿಯಲ್ ಅಸಿಸ್ಟೆಂಟ್ ಪಿ.ವಿ.ಕವಿತಾ ವಂದಿಸಿದರು. ಪ್ರತಿದಿನ ನಡೆಯುವ ಗೋಷ್ಠಿಗಳಲ್ಲಿ ಪ್ರತಿಭಾನ್ವಿತರು ತರಗತಿ ನಡೆಸುವರು. ಏ.27ರಂದು ಕಾರ್ಯಾಗಾರ ಸಮಾಪ್ತಿಗೊಳ್ಳಲಿದೆ.


