ಮಂಜೇಶ್ವರ: ಮಂಜೇಶ್ವರ ಉಪಚುನಾವಣೆ ಅ.21ರಂದು ನಡೆಯಲಿದೆ. ಅಭ್ಯರ್ಥಿಗಳಿಗೆ ಸೆ.30ರ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಕೆಗೆ ಅವಧಿ ನೀಡಲಾಗಿದೆ. ಚುನಾವಣಾಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್ (ಎಲ್.ಆರ್.) ಎನ್.ಪ್ರೇಮಚಂದ್ರನ್ ಅವರ ಜಿಲ್ಲಾಧಿಕಾರಿ ಕಚೇರಿಯ ಆಫೀಸ್ ನಲ್ಲೂ, ಉಪಚುನಾವಣಾಧಿಕಾಯಾಗಿರುವ ಮಂಜೇಶ್ವರ ಬ್ಲೋಕ್ ಡೆವೆಲಪ್ ಮೆಂಟ್ ಆಫೀಸರ್ ಎನ್.ಸುರೇಂದ್ರನ್ ಅವರ ಬಿ.ಡಿ.ಒ. ಕಚೇರಿಯಲ್ಲೂ ನಾಮಪತ್ರಿಕೆ ಸಲ್ಲಿಸಬಹುದು. ಚಟುವಟಿಕೆಗಳ ದಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಸಬಹುದು.
ಸೂಕ್ಷ್ಮ ತಪಾಸಣೆ ಅ.1ರಂದು:
ಮಂಜೇಶ್ವರ ಉಪಚುನಾವಣೆ ಸಂಬಂಧ ನಾಮಪತ್ರಿಕೆ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರಿಕೆಗಳ ಸೂಕ್ಷ್ಮ ತಪಾಸಣೆ ಅ.1ರಂದು ನಡೆಯಲಿದೆ. ಹಿಂತೆಗೆತಕ್ಕೆ ಕೊನೆಯ ದಿನಾಂಕ ಅ.3.
ಮತದಾನ ಖಚಿತತೆ ತಪಾಸಣೆ:
2019 ಜ.1ರಂದು ಪ್ರಕಟಿಸಿದ ಮತದಾತರ ಪಟ್ಟಯಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮತದಾತರ ಪಟ್ಟಿ ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್ ಎಂಬ ವೆಬ್ ಸೈಟ್ ಮೂಲಕ ಕ್ಷೇತ್ರದ ಮತದಾರರು ಮತನೀಡುವ ಅವಕಾಶದ ಖಚಿತತೆಯನ್ನು ನಡೆಸಬಹುದಾಗಿದೆ.
ನಿಗಾ ತಂಡಗಳ ಚುಟುವಟಿಕೆ ಆರಂಭ:
ಮಂಜೇಶ್ವರ ಉಪಚುನಾವಣೆ ಸುಲಲಿತವಾಗಿ ನಡೆಸುವ ನಿಟ್ಟಿನಲಲಿ ಆಂಟಿ ಡಿಫೆಮೆಂಟ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ಟೀಂ, ಎಂ.ಸಿ.ಎಂ.ಸಿ. ಸಹಿತ ನಿಗಾ ತಂಡಗಳ ಚಟುವಟಿಕೆ ಆರಂಭವಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಉಪಚುನಾವಣೆ: ಮೊದಲ ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ!:
ಮಂಜೇಶ್ವರ ವಿಧಾನಸಭೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನಾಮಪತ್ರಿಕೆ ಸಲ್ಲಿಕೆ ಸಂಬಂಧ ಪ್ರಕ್ರಿಯೆಗಳು ಆರಂಭಗೊಂಡಿದ್ದರೂ,ಮೊದಲ ದಿನವಾಗಿರುವ ಸೋಮವಾರ (ಸೆ.23) ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ.

