HEALTH TIPS

25ರಂದು ಕಾಸರಗೋಡು ಜಿಲ್ಲಾ ಪಂಚಾಯತ್ ಲೈಫ್ ಕುಟುಂಬ ಸಂಗಮ


       ಕಾಸರಗೋಡು:  ಕಾಸರಗೋಡು ಜಿಲ್ಲಾ ಪಂಚಾಯತ್ ವತಿಯಿಂದ ಲೈಫ್ ಮಿಷನ್ ಕುಟುಂಬ ಸಂಗಮ ಜ.25ರಂದು ಪಿಲಿಕುಂಜೆ ಪುರಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
       ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಎಂ.ಸಿ.ಕಮರುದ್ದೀನ್, ಎಂ.ರಾಜಗೋಪಾಲ್, ಕೆ.ಕುಂuಟಿಜeಜಿiಟಿeಜರಾಮನ್, ಬ್ಲೋಕ್-ಗ್ರಾಮ ಪಂಚಾಯತ್, ನಗರಸಭೆ ಅಧ್ಯಕ್ಷರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿರುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಸ್ವಾಗತಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವರದಿ ವಾಚಿಸುವರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸುವರು.
       ಜಿಲ್ಲೆಯ 38 ಗ್ರಾಮಪಂಚಾಯತ್ ಗಳಿಂದ, ಮೂರು ನಗರಸಭೆಗಳಿಂದ ಸುಮಾರು 800 ಫಲಾನುಭವಿಗಳು ಮತ್ತು ಗ್ರಾಮಸೇವಕರು ಈ ಕುಟುಂಬ ಸಂಗಮದಲ್ಲಿ ಭಾಗವಹಿಸುವರು. ಒಂದು ವಾರ್ಡ್ ನಿಂದ ಒಬ್ಬ ಫಲಾನುಭವಿ ಎಂಬಗಣನೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್, ನಗರಸಭೆಗಳ ವಾರ್ಡ್ ಮಟ್ಟದ ಫಲಾನುಭವಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಲಾಗುವುದು. ಲೈಫ್ ಮಿಷನ್ ಕುಟುಂಬ ಸಂಗಮದಲ್ಲಿ ಅತ್ಯುತ್ತಮ ಫಲಾನುಭವಿಯನ್ನು ಆಯ್ಕೆ ಮಾಡಿ ಬಹುಮಾನನೀಡಲಾಗುವುದು. ಲೈಫ್ ಮಿಷನ್ ಯೋಜನೆ ಸಂಬಂಧಿ ಚಟುವಟಿಕೆಗಳಲ್ಲಿ ಶೇ 100 ಫಲಿತಾಂಶ ಪಡೆದ ಗ್ರಾಮಪಂಚಾಯತ್ ಗಳಿಗೆ ಬಹುಮಾನ ವಿತರಿಸಲಾಗುವುದು. ಅತ್ಯುತ್ತಮ ಚಟುವಟಿಕೆ ನಡೆಸಿದ ನಿರ್ವಹಣೆ ಸಿಬ್ಬಂದಿಯನ್ನು ಗೌರವಿಸಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries