HEALTH TIPS

ಪ್ಲಸ್ ವನ್ ತರಗತಿಗೆ ಆನ್‍ಲೈನ್ ಅರ್ಜಿ ಸ್ವೀಕಾರ ಆರಂಭ-ಜಿಲ್ಲೆಯ ಎಲ್ಲಾ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸೀಟುಗಳ ಹೆಚ್ಚಳ

ಕಾಸರಗೋಡು: ಕೇರಳದ ಪದವಿ ಪೂರ್ವ ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರವೇಶನ ಸೌಲಭ್ಯದ ಸೀಟು ಕೊರತೆ ಪರಿಗಣಿಸಿ ರಾಜ್ಯದ 9 ಜಿಲ್ಲೆಗಳ ಪ್ಲಸ್ ವನ್ ತರಗತಿಗಳಿಗೆ ಸೀಟು ಹೆಚ್ಚಳಗೊಳಿಸಲಾಗಿದೆ. ಕಾಸರಗೋಡು ಸಹಿತ ಏಳು ಜಿಲ್ಲೆಗಳ ಎಲ್ಲಾ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಗಳಲ್ಲಿ ನೂತನ ಬ್ಯಾಚ್ ಸಹಿತ 30 ಶೇಕಡಾ ಸೀಟು ಹೆಚ್ಚಿಸಲಾಗಿದೆ. 


ಉಳಿದ ಎರಡು ಜಿಲ್ಲೆಯಲ್ಲಿ ಶೇ. 20  ಸೀಟು ಹೆಚ್ಚಿಸಲಾಗಿದೆ. ಪ್ರಸಕ್ತ ಕೇರಳದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಪ್ಲಸ್ ವನ್ ಪ್ರವೇಶನಕ್ಕೆ 3,61,044 ಸೀಟುಗಳು ಲಭ್ಯವಿದೆ. 352 ತಾತ್ಕಾಲಿಕ ಬ್ಯಾಚ್ ಮತ್ತು ಸರ್ಕಾರಿ ಯಾ ಅನುದಾನಿತ ಶಾಲೆಗಳ ಆನುಪಾತಿಕ ಸೀಟುಗಳ ಹೆಚ್ಚಳ ಒಳಗೊಂಡಂತೆ ಪ್ಲಸ್ ವನ್ ತರಗತಿಯ ಸೀಟುಗಳ ಸಂಖ್ಯೆ 4.26 ಲಕ್ಷಕ್ಕೆ ಏರಿಕೆಯಾಗಲಿದೆ.

ನೂತನವಾಗಿ ಕಾಸರಗೋಡು, ತಿರುವನಂತಪುರ, ಪಾಲಕ್ಕಾಡ್, ಕೋಯಿಕ್ಕೋಡ್, ಮಲಪ್ರುರಂ, ವಯನಾಡ್, ಕಣ್ಣೂರು ಜಿಲ್ಲೆಗಳ ಎಲ್ಲಾ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಗಳಲ್ಲೂ ಪ್ಲಸ್ ವನ್ ಪ್ರವೇಶಾತಿಗೆ ಶೇ. 30  ಸೀಟು ಹೆಚ್ಚಳ ಮತ್ತು ನೂತನ ಬ್ಯಾಚು ಮಂಜೂರು ಮಾಡಲಾಗಿದೆ. ಕೊಲ್ಲಂ- ತ್ರಿಶ್ಶೂರು ಜಿಲ್ಲೆಗಳ ಎಲ್ಲಾ ಸರ್ಕಾರಿ, ಅನುದಾನಿತ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಶೇ. 20ರಷ್ಟು ಸೀಟು ಹೆಚ್ಚಿಸಲಾಗಿದೆ.  








 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries