HEALTH TIPS

ಸನ್‌ಸ್ಟ್ರೋಕ್‌ ಅಂದ್ರೇನು? ಲಕ್ಷಣಗಳೇನು? ಯಾವಾಗ ಎಚ್ಚೆತ್ತುಕೊಳ್ಳಬೇಕು?

ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳಗ್ಗೆಯೇ ಸುಡು ಬಿಸಿಲು ಶುರುವಾಗುತ್ತೆ. ಈ ಸಮಯದಲ್ಲಿ, ಬಿಸಿಲಿನಲ್ಲಿ ಹೆಚ್ಚು ಓಡಾಡುವವರಿಗೆ ಸನ್‌ಸ್ಟ್ರೋಕ್‌ ಅಥವಾ ಬಿಸಿಲಿನ ಹೊಡೆತ ಸಾಮಾನ್ಯ. ಹಾಗಾದ್ರೆ, ಸನ್‌ಸ್ಟ್ರೋಕ್‌ ಆದಾಗ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ತಿಳಿಯೋಣ.

ಬೇಸಿಗೆಯಲ್ಲಿ ತಾಪಮಾನ ವಿಪರೀತ ಹೆಚ್ಚಾದಾಗ, ನಮ್ಮ ದೇಹಕ್ಕೆ ಅದನ್ನು ತಡೆದುಕೊಳ್ಳಲು ಆಗುವುದಿಲ್ಲ. ಈ ಸ್ಥಿತಿಯನ್ನೇ ಸನ್‌ಸ್ಟ್ರೋಕ್‌ (ಬಿಸಿಲಿನ ಹೊಡೆತ) ಎನ್ನುತ್ತಾರೆ. ಇದು ಸಾಮಾನ್ಯ ವಿಷಯವಲ್ಲ. ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳದಿದ್ದರೆ ಪ್ರಾಣಕ್ಕೂ ಅಪಾಯ ಬರಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಇದರ ಅಪಾಯ ಹೆಚ್ಚು.

ಸನ್‌ಸ್ಟ್ರೋಕ್‌ ಒಂದೇ ಬಾರಿಗೆ ಆಗುವುದಿಲ್ಲ. ಅದಕ್ಕೂ ಮುನ್ನ ನಮ್ಮ ದೇಹ ಕೆಲವು ಸಂಕೇತಗಳನ್ನು ನೀಡುತ್ತದೆ. ಅವುಗಳನ್ನು ಗಮನಿಸಿದರೆ ಅಪಾಯದಿಂದ ಪಾರಾಗಬಹುದು.

ತೀವ್ರ ತಲೆನೋವು, ತಲೆಸುತ್ತು: ತಲೆ ಭಾರವಾದಂತೆ ಅನಿಸುವುದು, ತಲೆಸುತ್ತು ಬರುವುದು ಮೊದಲ ಲಕ್ಷಣ.

ಅತಿಯಾದ ಆಯಾಸ, ದೌರ್ಬಲ್ಯ: ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಅನಿಸುತ್ತದೆ. ಸಣ್ಣ ಕೆಲಸ ಮಾಡಲು ಕೂಡ ಕಷ್ಟವಾಗುತ್ತದೆ.

ವಿಪರೀತ ಬೆವರು ಅಥವಾ ಬೆವರು ನಿಲ್ಲುವುದು: ಕೆಲವರಿಗೆ ಹೆಚ್ಚು ಬೆವರುತ್ತದೆ, ಇನ್ನು ಕೆಲವರಿಗೆ ಇದ್ದಕ್ಕಿದ್ದಂತೆ ಬೆವರುವುದು ನಿಂತುಹೋಗುತ್ತದೆ. ಇವೆರಡೂ ಅಪಾಯದ ಸೂಚನೆಗಳು.

ಬಾಯಿ ಒಣಗುವುದು, ಹೆಚ್ಚು ಬಾಯಾರಿಕೆ: ನಿರ್ಜಲೀಕರಣದ (Dehydration) ಆರಂಭದ ಸಂಕೇತ ಇದು.

ಆತಂಕ, ಗೊಂದಲ: ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಆಗದಿರುವುದು, ಮನಸ್ಸು ಅಶಾಂತವಾಗಿರುವುದು. ದೇಹ ಬಿಸಿಯಾಗುವುದು: ಸ್ವಲ್ಪ ಜ್ವರ ಬಂದಂತೆ ಅನಿಸುತ್ತದೆ.

 ಈ ಸಂಕೇತಗಳು ಕಾಣಿಸಿಕೊಂಡ ತಕ್ಷಣ ತಡ ಮಾಡಬಾರದು. ತಕ್ಷಣ ಬಿಸಿಲಿನಿಂದ ದೂರ, ತಂಪಾದ ಜಾಗಕ್ಕೆ ಹೋಗಬೇಕು. ನೀರು ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಕುಡಿಯಬೇಕು. ದೇಹವನ್ನು ತಂಪಾಗಿಸಲು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಯಾವುದೇ ಕೆಲಸ ಮಾಡುತ್ತಿದ್ದರೂ ಅದನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು. ಲಕ್ಷಣಗಳು ಹೆಚ್ಚಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಸಾಮಾನ್ಯ ಅಭ್ಯಾಸಗಳನ್ನು ಪಾಲಿಸಿದರೆ ಸನ್‌ಸ್ಟ್ರೋಕ್‌ನಿಂದ ರಕ್ಷಣೆ ಪಡೆಯಬಹುದು. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಗೆ ಹೋಗುವುದನ್ನು ಕಡಿಮೆ ಮಾಡಿ. ಹಗುರವಾದ, ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ತಲೆಗೆ ಬಟ್ಟೆ ಕಟ್ಟಿಕೊಳ್ಳಿ. ಆಗಾಗ ನೀರು ಕುಡಿಯುತ್ತಿರಿ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದಾದರೆ, ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಎಳನೀರು, ನಿಂಬೆರಸ, ಮಜ್ಜಿಗೆ, ಹಣ್ಣಿನ ರಸಗಳು, ಗ್ಲೂಕೋಸ್ ಅಥವಾ ORS ದ್ರಾವಣಗಳನ್ನು ತೆಗೆದುಕೊಳ್ಳಬೇಕು. ಇಂತಹ ಜಾಗ್ರತೆ ವಹಿಸಿದರೆ ಸನ್‌ಸ್ಟ್ರೋಕ್‌ಗೆ ಕಡಿವಾಣ ಹಾಕಬಹುದು.

ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಕೇವಲ ಪ್ರಾಥಮಿಕ ತಿಳುವಳಿಕೆಗಾಗಿ. ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries