ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡಮಿ (ಐಎಂಎ)ಯಿಂದ 9 ಮಂದಿ ಮಹಿಳಾ ಲೆಫ್ಟಿನೆಂಟ್‌ಗಳು ನಿಯೋಜನೆಗೊಂಡಿದ್ದರೆ, ದುಂಡಿಗಲ್‌ನ ವಾಯುಪಡೆ ಅಕಾಡಮಿ(ಎಎಫ್‌ಎ)ಯಿಂದ ಐವರು ಮಹಿಳೆಯರು ನಿಯುಕ್ತಿಗೊಂಡಿದ್ದಾರೆ.
2021ರಲ್ಲಿ ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪೊಂದರಲ್ಲಿ ಎನ್‌ಡಿಎಗೆ ಮಹಿಳೆಯರ ಸೇರ್ಪಡೆಗೆ ಅವಕಾಶವನ್ನು ಕಲ್ಪಿಸಿತ್ತು.
ಈವರೆಗೆ, ಭೂಸೇನೆ ಹಾಗೂ ವಾಯುಪಡೆಗೆ ಅಲ್ಪಾವಧಿಯ ಸೇವೆ (ಎಸ್‌ಎಸ್‌ಸಿ) ವಿಧಾನದಡಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. ಕೆಲವು ವರ್ಷಗಳ ಸೇವೆಯ ಆನಂತರವಷ್ಟೇ ಅವರನ್ನು ಖಾಯಂ ಸೇವೆಗೆ ನಿಯೋಜಿಸಲಾಗುತ್ತಿತ್ತು. ಇದೀಗ ಎನ್‌ಡಿಎ-ಐಎಂಎ ಹಾಗೂ ಎನ್‌ಡಿಎ-ಎಫ್‌ಪಿಎ ಮೂಲಕ ನಿಯೋಜನೆಗೊಂಡಿರುವ ಈ 14 ಮಹಿಳಾ ಅಧಿಕಾರಿಗಳು ಪೂರ್ಣಾವಧಿಯ ಸೇವೆಯನ್ನು ಪಡೆಯಲಿದ್ದಾರೆ.
ಆದರೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಯಲ್ಲಿ ಮಹಿಳಾ ಅಧಿಕಾರಿಗಳು ಹಲವು ದಶಕಗಳಿಂದ ಶಾಶ್ವತ ಸೇವೆಗೆ ನಿಯೋಜನೆಗೊಳುತ್ತಾ ಬಂದಿದ್ದಾರೆ.

