HEALTH TIPS

ಕುಂಡಂಗುಳಿಯಲ್ಲಿ ಭಾರೀ ಶಬ್ದದೊಂದಿಗೆ ರಸ್ತೆ ಇಬ್ಭಾಗ: 50 ಮೀಟರ್ ದೂರದವರೆಗೆ ಬಿರುಕು

 ಕಾಸರಗೋಡು: ಭಾರೀ ಶಬ್ದದೊಂದಿಗೆ ಕುಂಡಂಗುಳಿಯಲ್ಲಿ ರಸ್ತೆ ಬಿರುಕು ಬಿಟ್ಟಿದೆ.  ಕುಂಡಂಗುಳಿ, ಮೂನಾಂಗಡವ್ ರಸ್ತೆ ಜಂಕ್ಷನ್ ಸಮೀಪ ಪೊಯಿನಾಚಿ- ಬಂದಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಂಡು ಬಂದಿದೆ. ಭಾರೀ ಮಳೆಯ ಮಧ್ಯೆ ಭಯಂಕರ ಶಬ್ದವುಂಟಾಗಿತ್ತೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆ ಕ್ಷಣದಲ್ಲೇ ೫೦ ಮೀಟರ್‌ನಷ್ಟು ದೂರದಲ್ಲಿ ರಸ್ತೆ ಇಬ್ಭಾಗವಾದ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಿರುಕಿನಲ್ಲಿ ಮಳೆನೀರು  ಹರಿಯುತ್ತಿದೆ. ಸಿಡಿಲು ಬಡಿದು ರಸ್ತೆ ಇಬ್ಭಾಗವಾಗಿರಬೇಕೆಂದು ಶಂಕಿಸಲಾಗುತ್ತಿದೆ. ಆದರೆ ಮಿಂಚು ಸ್ಥಳೀಯರ ಗಮನಕ್ಕೆ ಬಂದಿರಲಿಲ್ಲವೆಂದು ಹೇಳಲಾಗುತ್ತಿದೆ. ಬಸ್ ಸಹಿತ ಇತರ ಯಾವುದಾದರೂ ವಾಹನಗಳು ಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದರೆ ದೊಡ್ಡ ದುರಂತ ಉಂಟಾಗಲು ಸಾಧ್ಯತೆ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries