ಕಾಸರಗೋಡು: ಭಾರತೀಯ ರಾಜ್ಯ ಪಿಂಚಣಿದಾರರ ಮಹಾ ಸಂಘ(ಬಿಆರ್‍ಪಿಎಂಎಸ್)ದ ಕಾಸರಗೋಡು ಜಿಲ್ಲಾ ಸಮ್ಮೇಳನ ಮತ್ತು ಕುಟುಂಬ ಸಭೆ ಚಟ್ಟಂಚಾಲ್‍ನ ತೈರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಬಿಆರ್‍ಪಿಎಂಎಸ್ ರಾಜ್ಯಾಧ್ಯಕ್ಷ ಎಂ. ವಿಜಯಕುಮಾರ್ ಸಮ್ಮೇಳನವ ಉದ್ಘಾಟಿಸಿದರು.ಸಂಘಟನೆ ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಆರೆಸ್ಸೆಸ್ ಹಿರಿಯ ಪ್ರಚಾರಕ ಎ.ಸಿ.ಗೋಪಿನಾಥ್ ಮುಖ್ಯ ಭಾಷಣ ಮಾಡಿದರು. ಬಿಆರ್‍ಪಿಎಂಎಸ್ ಮುಖಂಡರಾದ ಸಿ.ಎಚ್. ಸುರೇಶ್, ಕೆ.ದಯಾನಂದ, ರಾಜಲಕ್ಷ್ಮಿ ಕುಞಮ್ಮ, ಪಿ.ಆರ್.ಮುರಳೀಧರನ್, ಎಸ್.ಎಸ್.ಸುರೇಶ್ ಕುಮಾರ್, ರಘುಕುಮಾರನ್ ನಾಯರ್, ಕೆ.ಕೃಷ್ಣನ್‍ಕುಟ್ಟಿ, ರವೀಂದ್ರನ್ ಚಟ್ಟಂಕಾಯಿ, ಎ.ಮುರಳೀಧರನ್, ಕೆ.ಮಾಧವನ್ ನಾಯರ್, ಕೆ.ಎಂ. ಮಾಧವ ಭಟ್, ಬೇಬಿ, ಉಮಾದೇವಿ, ಎ. ಬಾಲಕೃಷ್ಣನ್ ಉಪಸ್ಥಿತರಿದ್ದರು. ಬಿಆರ್‍ಪಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಶ್ರೀಕಂಠನ್ ನಾಯರ್ ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಪಿ. ಪ್ರದೀಪ್ ಕುಮಾರ್ ವಂದಿಸಿದರು.

