ಬದಿಯಡ್ಕ: ಸುಮಾರು 15 ವರ್ಷಗಳಿಂದ ದಕ್ಷಿಣ ರೈಲ್ವೇಯಲ್ಲಿ ಸೇವೆಗೈಯುತ್ತಿರುವ ಕುಂಬ್ಡಾಜೆ ಗೋಸಾಡ ನಿವಾಸಿ ಅನಿಲ್ ಕುಮಾರ್ ರಿಗೆ ದಕ್ಷಿಣ ರೈಲ್ವೇಯ ಪ್ರತಿಷ್ಠಿತ ಪ್ರಶಸ್ತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ಲಭಿಸಿದೆ. ದಕ್ಷಿಣ ರೈಲ್ವೇಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಇವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು, ಸುರತ್ಕಲ್‍ನಿಂದ ಕುಂಬಳೆ ವರೆಗಿನ ರೈಲ್ವೇ ಹೊಣೆಯನ್ನು ಇವರಿಗೆ ವಹಿಸಲಾಗಿದೆ.
ಇತ್ತೀಚೆಗೆ ಪಾಲಕ್ಕಾಡ್ ಡಿವಿಷನ್ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದಕ್ಷಿಣ ರೈಲ್ವೇಯ ಜನರಲ್ ಮೆನೇಜರ್ ಈ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಕಾರ್ಯಾಚರಣಾ ಶ್ರೇಷ್ಠತೆಗೆ ರೈಲ್ವೇ ಇಲಾಖೆ ಪ್ರತೀ ವರ್ಷ ಈ ವಿಶಿಷ್ಟ ಸೇವಾ ಪುರಸ್ಕಾರವನ್ನು ನೀಡುತ್ತಿದ್ದು, ಈ ವರ್ಷ ಈ ಪ್ರಶಸ್ತಿ ಅನಿಲ್ ಕುಮಾರ್ ಗೋಸಾಡ ಇವರಿಗೆ ಲಭಿಸಿದೆ.

.jpg)
